ಮನೋರಂಜನೆ

ನಾನು ಇದುವರೆಗೆ ಡೇಟಿಂಗ್‌ ಮಾಡಿಯೇ ಇಲ್ಲ! : ಪ್ರಿಯಾಂಕಾ ಚೋಪ್ರಾ

Pinterest LinkedIn Tumblr

priyanka-chopraಮುಂಬಯಿ : ಇದನ್ನು ನಂಬಲು ಸ್ವಲ್ವ ಕಷ್ಟವಾಗಬಹುದು ಆದರೆ ನಂಬಲೇಬೇಕು . ನಾನು ಇದು ವರೆಗೆ ಡೇಟಿಂಗ್‌ ಮಾಡಿಯೇ ಇಲ್ಲ ಎಂದು ಬಾಲಿವುಡ್‌ ಮತ್ತು ಹಾಲಿವುಡ್‌ ಖ್ಯಾತಿಯ ಸೆಕ್ಸಿ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ಇನ್‌ಸ್ಟೈಲ್‌ ಮ್ಯಾಗಜೀನ್‌ನ ಮುಂಬರುವ ಸಂಚಿಕೆಗೆ ಸಂದರ್ಶನ ನೀಡಿರುವ 33 ರ ಹರೆಯದ ಪ್ರಿಯಾಂಕಾ ಬರಹಗಾರ ವೆರೋನಿಕಾ ಚೇಂಬರ್ಸ್‌ ಅವರ ಬಳಿ ಹಲವು ರಹಸ್ಯ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ನೀವು ಡೇಟಿಂಗ್‌ ಮಾಡುತ್ತಿದ್ದಿರಾ ಎನ್ನುವ ಸಣ್ಣ ಪ್ರಶ್ನೆಗೆ ಉದ್ದನೆಯ ಉತ್ತರ ನೀಡಿರುವ ಪ್ರಿಯಾಂಕಾ ‘ನಾನು ಎಂದೂ ಡೇಟಿಂಗ್‌ ಮಾಡಿಯೇ ಇಲ್ಲ. ಈ ಪರಿಕಲ್ಪನೆ ಭಾರತದಲ್ಲಿ ಇಲ್ಲವೇ ಇಲ್ಲ. ಪ್ರಶ್ನೆಗೆ ಉತ್ತರಿಸಲಾಗದ ವಿಚಾರ ಡೆಟೀಂಗ್‌ ,ಓ ದೇವರೆ ನನಗೆ ಡೇಟಿಂಗ್‌ ಮಾಡಲು ಸಾಧ್ಯವಾಗುತ್ತದೋ ಎಂದು ನನಗೇ ತಿಳಿದಿಲ್ಲ’ ಎಂದಿದ್ದಾರೆ.

ಅಗಸ್ಟ್‌ ತಿಂಗಳ ಇನ್‌ ಸ್ಟೈಲ್‌ ಸಂಚಿಕೆಯಲ್ಲಿ ಮುಖಪುಟದಲ್ಲಿ ಪ್ರಿಯಾಂಕಾ ಅವರ ಫೋಟೋ ಪ್ರಕಟಿಸಲಾಗಿದ್ದು ಸಂದರ್ಶನವನ್ನೊಳಗೊಂಡ ಸಂಚಿಕೆಯನ್ನು ಜುಲೈ 8ರ ಬಳಿಕ ಡಿಜಿಟಲ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
-ಉದಯವಾಣಿ

Comments are closed.