ಕರಾವಳಿ

ಹಲವು ಕೃಷಿ ಉತ್ಪನ್ನಗಳ ಕಳವುಗೈದ ಕುಖ್ಯಾತ ಕಳ್ಳರ ಬಂಧನ

Pinterest LinkedIn Tumblr

araeknut_theft_accused

ಕಾಸರಗೋಡು, ಜು.2: ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿದಿದ ಘಟನೆ ಇಂದು ಬದಿಯಡ್ಕ ಬಳಿ ನಡೆದಿದೆ.

ಬಂಧಿತರನ್ನು ನೆಲ್ಲಿಕಟ್ಟೆ ಮೀನಾಡಿಪಳ್ಳದ ಅಬ್ದುರ್ರಹ್ಮಾನ್(58), ಮಂಗಳೂರು ಜೋಕಟ್ಟೆಯ ನಿವಾಸಿ ಉಮರುಲ್ ಫಾರೂಕ್(44), ಉಳ್ಳಾಲದ ಮುಹಮ್ಮದ್ ಹನೀಫ್(45) ಎಂದು ಗುರುತಿಸಲಾಗಿದೆ.

ಬದಿಯಡ್ಕ ಬಳಿಯ ಬಾರಡ್ಕ ನಿವಾಸಿ ಹಾಗೂ ಬದಿಯಡ್ಕದಲ್ಲಿ ವ್ಯಾಪಾರಿಯಾಗಿರುವ ಯೂಸಫ್ ಎಂಬವರ ಮನೆ ಬಳಿಯ ಶೆಡ್‌ನಿಂದ ಅಡಿಕೆ ಕಳವುಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಾಗಿದ್ದಾರೆ.

ಜೂ.23ರಂದು ರಾತ್ರಿ ಬದಿಯಡ್ಕಕ್ಕೆ ಇನ್ನೋವಾ ಕಾರಿನಲ್ಲಿ ಬಂದ ಈ ಮೂರು ಮಂದಿ ಬಾರಡ್ಕಕ್ಕೆ ತಲುಪಿ ಯೂಸಫ್ ಮನೆ ಬಳಿಯ ಅಡಿಕೆ ದಾಸ್ತಾನು ಶೆಡ್‌ನ ಬೀಗ ಮುರಿದು ಕೃತ್ಯ ನಡೆಸಿದ್ದರು ಎಂದು ತಿಳಿದುಬಂದಿದೆ.

Comments are closed.