ಉಡುಪಿ: ಕೆಲವರು ವಿವಿಧ ಹಲಸಿನ ತಳಿಯ ರುಚಿಯನ್ನ ನೋಡುತ್ತಿದ್ದರೆ ಇನ್ನು ಕೆಲವರು ಹಲಸನ್ನೇ ಮನೆಗೆ ಕೊಂಡೊಯ್ಯುತ್ತಿದ್ದರು. ಇದರ ಜೊತೆಗೆ ಹಲಸಿನ ವಿವಿಧ ಖಾದ್ಯಗಳೂ ಕೂಡಾ ಜನರು ಸವಿದು ಖುಷಿಪಟ್ಟರು. ಇದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹಲಸಿನ ಹಬ್ಬದಲ್ಲಿ ಕಂಡು ಬಂದ ದೃಶ್ಯ.

ಪ್ರತೀ ವರ್ಷ ಕೃಷಿ ವಿಜ್ಞಾನ ಕೇಂದ್ರ ಹಲಸಿನ ಹಬ್ಬವನ್ನು ಆಯೋಜಿಸುತ್ತಾ ಬಂದಿದ್ದು ಈ ವರ್ಷ ೭ನೇ ವರ್ಷದ ಕಾರ್ಯಕ್ರಮ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡು ದಿನಗಳ ಹಲಸಿನ ಹಬ್ಬಕ್ಕೆ ಪೇಜಾವರ ಮಠ, ಸಾಮಾಜಿಕ ಉದ್ಯಮ ಶೀಲತಾ ಕೇಂದ್ರ ಮಣಿಪಾಲ, ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ ಬ್ಯಾಂಕ್ ಸಹಕಾರ ನೀಡಿದ್ದು ರಾಜ್ಯಮಟ್ಟದ ಹಲಸಿನ ಹಬ್ಬದಲ್ಲಿ ಅನೇಕ ತಳಿಯ ಹಲಸು ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಅತ್ಯಂತ ಪ್ರಸಿದ್ದಿ ತಳಿಗಳಾದ ಚಂದ್ರ ಹಲಸು, ರುದ್ರಾಕ್ಷಿ ಹಲಸು ಇಲ್ಲಿ ಮಾರಾಟ ಮತ್ತು ಪ್ರದರ್ಶಕ್ಕಿಡಲಾಗಿದ್ದು ಉಡುಪಿಯ ಜನತೆ ರುಚಿಯ ಜೊತೆಗೆ ಹಲವು ಹಲಸುಗಳು ಮನೆಗಳಿಗೂ ಪಾರ್ಸೆಲ್ ಆದವು. ಅದು ಮಾತ್ರವಲ್ಲದೇ ವಿವಿಧ ಹಲಸಿನ ಖಾದ್ಯಗಳನ್ನು ಕೂಡಾ ಸವಿದ ಜನರು ವಿವಿಧ ಹಲಸಿನ ಸಸಿಗಳನ್ನು ಕೂಡಾ ಮನೆಗೆ ಕೊಂಡಿಯ್ದರು.
ಒಟ್ಟಿನಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿರುವ ಹಲಸಿನ ಮೇಳದಲ್ಲಿ ಅನೇಕ ಪ್ರಾತ್ಯಾಕ್ಷಿಕೆ, ರೈತರಿಗೆ ಮಾಹಿತಿ ಹಾಗೂ ಹಲಸಿನಿಂದ ಆಗುವ ಲಾಭ ಹಾಗೂ ಪ್ರಯೋಜನದ ಬಗ್ಗೆಯೂ ಸೂಕ್ತ ಮಾಹಿತಿಯೂ ತಜ್ಞರಿಂದ ಸಿಕ್ಕಿತು. ಹಲಸಿನ ಬೆಳೆಗಳ ಬಗ್ಗೆ ಇನ್ನಾದರೂ ಕರಾವಳಿಯಲ್ಲಿ ಯುವಕರು ಆಸಕ್ತಿ ವಹಿಸಲಿ ಎಂಬುದು ಎಲ್ಲರ ಆಶಯವಾಗಿತ್ತು.
Comments are closed.