ನವದೆಹಲಿ: ಕುರ್ಬಾನಿ ಹೆಸರಿನಲ್ಲಿ ಕುರಿ ಹಾಗೂ ಪ್ರಾಣಿ ಬಲಿ ನೀಡುವುದು ಖಂಡನೀಯ. ಪ್ರಾಣಿಗಳನ್ನು ವಾತ್ಯಲ್ಯದಿಂದ ನೋಡುವ ಮೂಲಕ ಕುರ್ಬಾನಿ ಆಚರಿಸಿ ಎಂದು ಬಾಲಿವುಡ್ ನಟ ಇರ್ಫಾನ್ ಖಾನ್ ನೀಡಿದ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಜನಪ್ರಿಯ ನಟ ಇರ್ಫಾನ್ ಖಾನ್ ತಮ್ಮ ಮುಂಬರುವ ಚಿತ್ರ ಮದಾರಿ ಪ್ರಚಾರಾರ್ಥವಾಗಿ ಜೈಪುರಕ್ಕೆ ಆಗಮಿಸಿದ್ದರು. ಈ ಸಂದರ್ಭ ಕುರ್ಬಾನಿ ಕುರಿತು ಮಾತನಾಡಿದ್ದಾರೆ. ಇದರ ನೈಜ ಅರ್ಥ ತ್ಯಾಗ ಎನ್ನುವುದನ್ನು ನಾವು ಮರೆತಿದ್ದೇವೆ. ಇದಕ್ಕೆ ವಿರುದ್ಧವಾಗಿ ಕುರಿ, ಮೇಕೆಗಳನ್ನು ಬಲಿಕೊಟ್ಟು ಅಪಮಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ನಾವು ಧಾರ್ವಿುಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತುತತೆಯನ್ನೇ ಕಳೆದುಕೊಂಡಿದ್ದೇವೆ. ಮತ್ತು ಧಾರ್ವಿುಕ ಆಚರಣೆಗಳ ಮೂಲಾರ್ಥವನ್ನು ಮರೆತುಬಿಟ್ಟಿದ್ದೇವೆ. ಇಸ್ಲಾಂನಲ್ಲಿರುವ ರಂಜಾನ್ ಉಪವಾಸ ವೃತದ ಬಗ್ಗೆಯೂ ಮಾತನಾಡಿದ ಅವರು, ರಂಜಾನ್ ಸಂದರ್ಭದಲ್ಲಿ ಉಪವಾಸ ಮಾಡುವುದಕ್ಕಿಂತ ಆತ್ಮಾವಲೋಕನ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.
ನಾವು ಮುಸ್ಲಿಮರು ಮೊಹರಂನ ಅಣಕು ಮಾಡುತ್ತಿದ್ದೇವೆ. ನಿಜಕ್ಕೂ ಮೊಹರಂ ಸಂದರ್ಭದಲ್ಲಿ ಮಾಡಬೇಕಿರುವುದು ಶೋಕಾಚರಣೆ. ಆದರೆ ನಾವು ಮಾಡುತ್ತಿರುವುದು ಧಾರ್ವಿುಕ ಮೆರವಣಿಗೆ ಎಂದು ಇರ್ಫಾನ್ ಸ್ಪಷ್ಟನೆ ನೀಡಿದರು. ಬಾಲಿವುಡ್ ನಟನ ಹೇಳಿಕೆ ಮುಸ್ಲಿಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದು, ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಮಾತ್ ಇ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅಬ್ದುಲ್ ವಹೀದ್ ಖಾತ್ರಿ ಪ್ರತಿಕ್ರಿಯಿಸಿ, ಇರ್ಫಾನ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಇವರು ತಮ್ಮ ವೃತ್ತಿಯ ಬಗ್ಗೆ ದೃಷ್ಟಿ ಕೇಂದ್ರಿಕರಿಸುವ ಬದಲು ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ರೀತಿ ಹೇಳಿಕೆ ನೀಡುತ್ತಿರುವುದು ಪ್ರಚಾರಕ್ಕಾಗಿ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸೆನ್ಸಾರ್ ನಿಯಮಾವಳಿಯನ್ನು ಬದಲಿಸುವಂತೆ ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಾಜ್ ನಿಹಲಾನಿಗೆ ಮನವಿ ಮಾಡಿಕೊಂಡಿದ್ದಾರೆ.
Comments are closed.