ಬೆಂಗಳೂರು: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂಬಂತೆ ಸೆಂಟ್ರಲ್ ಸಿಲೆಬಸ್ ನ 6ನೇ ತರಗತಿ ಪುಸ್ತಕದಲ್ಲಿ ಬಿಂಬಿಸಲಾಗಿದೆ.
ಈ ಬಗ್ಗೆ ಮೇಲ್ಮನೆ ಕಲಾಪದಲ್ಲಿ ಸದಸ್ಯರು ಚರ್ಚೆ ನಡೆಸಬೇಕು. ಬಳಿಕ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಸೂರ್ಯಸೇನ್ ಅವರನ್ನು ಕ್ರಾಂತಿಕಾರಿ ಭಯೋತ್ಪಾದಕರು ಎಂಬಂತೆ ಬಿಂಬಿಸಲಾಗಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಸದಸ್ಯರು ಹಾಜರಿರಬೇಕು. ಇದನ್ನು ಮಾನವ ಸಂಪನ್ಮೂಲ ಸಚಿವರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.
-ಉದಯವಾಣಿ
Comments are closed.