ಕರ್ನಾಟಕ

ತಿಥಿ ಚಿತ್ರ ತಂಡದಿಂದ ಮತ್ತೊಂದು ಸಿನಿಮಾ “ತರ್ಲೆ ವಿಲೇಜ್'”

Pinterest LinkedIn Tumblr

Centurayಮೈಸೂರು: ದೇಶ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿ ಪ್ರಶಸ್ತಿಗಳನ್ನು ಪಡೆದಿದ್ದ ತಿಥಿ ಸಿನಿಮಾ ಚಿತ್ರತಂಡದಿಂದ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಹೌದು ತಿಥಿ ತಂಡದಿಂದ ತರ್ಲೆ ವಿಲೇಜ್ ಎಂಬ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ ನಡೆದಿದೆ.

ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ತರ್ಲೆ ವಿಲೇಜ್ ಚಿತ್ರಕ್ಕೆ ಸೆಂಚುರಿಗೌಡರು ಕ್ಲಾಪ್ ಮಾಡಿದ್ದರು. ತಿಥಿ ಚಿತ್ರದಲ್ಲಿ ನಟಿಸಿದ್ದ ಸೆಂಚುರಿಗೌಡ, ಅಭಿ, ಗಡ್ಡಪ್ಪ, ತಮ್ಮಣ್ಣ, ಶ್ರೀನಿವಾಸ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ತರ್ಲೆ ವಿಲೇಜ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ನಂಜನಗೂಡಿನ ಹೆಮ್ಮರಗಾಲದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ತಿಥಿ ಚಿತ್ರದ ಭರ್ಜರಿ ಯಶಸ್ಸಿನಿಂದ ಖುಷಿಗೊಂಡಿರುವ ಚಿತ್ರ ತಂಡ ತರ್ಲೆ ವಿಲೇಜ್ ಚಿತ್ರ ನಿರ್ಮಿಸಲು ಮುಂದಾಗಿದೆ.
-ಉದಯವಾಣಿ

Comments are closed.