ಪಣಜಿ: ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಪುಗಳಿಗೆ ಮಾಡಿರುವ ವೆಚ್ಚವು, ನಮ್ಮ ಸರ್ಕಾರ ಜಾಹೀರಾತಿಗಾಗಿ ಬಳಸಿದ ಹಣಕ್ಕಿಂತ ಹೆಚ್ಚು ಎಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮೋದಿಯವರು ಬಟ್ಟೆಗೆ ಅಪಾರ ಗೌರವ ನೀಡುತ್ತಾರ.ೆ ಆದ್ದರಿಂದ ಒಮ್ಮೆ ಧರಿಸಿದ ಬಟ್ಟೆಯನ್ನು ಪುನಃ ಧರಿಸುವುದಿಲ್ಲ. ಅಷ್ಟೇ ಅಲ್ಲ ಪ್ರತಿ ಬಟ್ಟೆಯ ಬೆಲೆ ಕಡಿಮೆ ಎಂದರೂ 2 ಲಕ್ಷ ರೂ. ಇದೆ. ದಿನಕ್ಕೆ ಐದು ಬಾರಿ ಮೋದಿ ಅವರು ಬಟ್ಟೆ ಬದಲಿಸುತ್ತಾರೆ. ಅಂದರೇ ದಿನಕ್ಕೆ 10 ಲಕ್ಷ ರೂ. ಕೇವಲ ಉಡುಪಿಗೆ ವ್ಯಯಿಸುತ್ತಾರೆ. ಹಾಗೆ ನೋಡಿದರೆ ನಮ್ಮ ಸರ್ಕಾರದ ಜಾಹೀರಾತು ಬಜೆಟ್ ಮೋದಿ ಅವರ ಉಡುಪಿನ ಬಜೆಟ್ಕ್ಕಿಂತ ಕಡಿಮೆ ಆಗಿದೆ. ನಾವು 526 ಕೋಟಿಯನ್ನು ಜಾಹಿರಾತಿನ ಮೇಲೆ ವ್ಯಯಿಸಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾವು ಇಲ್ಲಿಯವರೆಗೆ 76 ಕೋಟಿ ವೆಚ್ಚದ ಜಾಹಿರಾತು ಬಿಡುಗಡೆ ಮಾಡಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.
ಇದಕ್ಕೆ ಪುರಾವೆ ಕೂಡ ದೊರೆಯುತ್ತದೆ. ಗೂಗಲ್ಗೆ ಹೋಗಿ ’ಮೋದಿ’ ಎಂದು ಹುಡುಕಿದರೆ ಅವರು ಒಂದೇ ಬಟ್ಟೆ ಹಾಕಿರುವ ಫೋಟೋಗಳು ಒಂದೇ ಪಟ್ಟಿಯಲ್ಲಿ ಕಾಣಸಿಗುವುದೇ ಇಲ್ಲ. ಇದರಿಂದಲೇ ಗೊತ್ತಾಗುತ್ತದೆ ಮೋದಿ ಅವರು ವಿಲಾಸಿ ಪ್ರಿಯರು ಎಂದು. ಮೋದಿ ಅವರು ಕಳೆದ 700 ದಿನಗಳಿಂದ ಅಧಿಕಾರದಲ್ಲಿ ಇದ್ದಾರೆ. ಅಂದರೆ ಅವರ ಉಡುಗೆಯ ಮೇಲೆ 70 ಕೋಟಿ ವ್ಯಯಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಈ ಹಿಂದೆ ಬಿಜೆಪಿ ಸಂಸದರು ಕೇಜಿವಾಲ್ ಸರ್ಕಾರದ ಜಾಹೀರಾತು ಗೀಳನ್ನು ಟೀಕಿಸಿದ್ದರು. ಕೇವಲ 15 ದಿನಗಳ ಸಮ-ಬೇಸ ಯೋಜನೆ ಪ್ರಚಾರಕ್ಕೆ ಐದು ಕೊಟಿ ಹಣ ಖರ್ಚು ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ವಿರೊಧ ಪಕ್ಷದ ನಾಯಕರು ದೂರಿದ್ದರು. ಕೇಂದ್ರ ರಾಜ್ಯ ಖಾತೆ ಸಚಿವ ಹರಿಭಾಯಿ ಪಾರತಿಭಾಯಿ ಚೌಧರಿ ಪ್ರತಿಕ್ರಿಯಿಸಿ, ಸಮ-ಬೆಸ ಯೊಜನೆಗಾಗಿ ಮುದ್ರಣ ಮಾಧ್ಯಮಕ್ಕೆ ರೂ. 1.67 ಕೊಟಿ ಹಣ ಹೂಡಿಕೆ ಮಾಡಿದ್ದರೆ, ವಿದ್ಯುನ್ಮಾನ ಮಾಧ್ಯಮಗಳಿಗೆ ರೂ. 3.72 ಕೊಟಿ ಹಣವನ್ನು ವ್ಯಯ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದರು.
Comments are closed.