ಬೆಂಗಳೂರು, ಜೂ. ೩೦-ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಆಪ್ತ ಜಯರಾಂ ಸೇರಿದಂತೆ ಬಿಬಿಎಂಪಿಯ ೩ ಇಂಜಿನಿಯರ್‌ಗಳ ಕಚೇರಿ, ಮನೆಗಳ ಮೇಲೆ ಎಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಆಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ಕಾರ್ಯನಿರ್ವಾಹಕ ಅಭಿಯಂತರಾದ(ಎಇ)ಮಾಲತೇಶ್, ಕೆಂಪೇಗೌಡ ಹಾಗೂ ಸಹಾಯಕ ಇಂಜಿನಿಯರ್ ವಿಶ್ವಾಸ್ ಅವರ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಕೆಂಪೇಗೌಡ ಅವರ ಹೆಚ್‌ಬಿಆರ್ ಲೇಔಟ್‌ನ ಮನೆ,ಮಾಲತೇಶ್ ಅವರ ಕೊಡಿಗೇಹಳ್ಳಿ ನಿವಾಸ ವಿಶ್ವಾಸ್ ಅವರ ಬಸವನಗುಡಿಯ ನಿವಾಸ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಮುನಿರತ್ನ ಅವರ ಅಪ್ತ ಸಹಾಕರ ಶಂಕರ್ ಅವರ ಮನೆ ಮೇಲೂ ದಾಳಿ ನಡೆಸಿ ವೃಷಭಾವತಿ ನಿರ್ಮಾಣ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಲೋಕಾಯುಕ್ತ ಪ್ರಭಾರ ಎಸ್‌ಪಿ ಅಬ್ದುಲ್ ಅಹದ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Comments are closed.