ಕರ್ನಾಟಕ

ಶಾಲೆಗೆ ಹೋಗಲು ಒತ್ತಡ: ಬಾಲಕ ನೇಣು

Pinterest LinkedIn Tumblr

chandra-shekerಬೆಂಗಳೂರು,ಜೂ.೩೦-ಶಾಲೆಗೆ ಹೋಗಲು ಒತ್ತಾಯಿಸಿದ್ದಕ್ಕೆ ನೊಂದ ೧೩ ವರ್ಷದ ಬಾಲಕನೊಬ್ಬ ನೇಣಿಗೆ ಶರಣಾಗಿರುವ ಕಳವಳಕಾರಿ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅವರ ಪುತ್ರ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ.
ಐದನೇ ತರಗತಿಗೆ ಶಾಲೆ ಬಿಟ್ಟು ಮನೆಯಲ್ಲಿರುತ್ತಿದ್ದ ಚಂದ್ರಶೇಖರ್‌ನನ್ನು ಶಾಲೆಗೆ ಹೋಗುವಂತೆ ಪೋಷಕರು ಬುದ್ದಿ ಹೇಳುತ್ತಿದ್ದರಾದರೂ ಆತ ಶಾಲೆಗೆ ಹೋಗಲು ನಿರಾಕರಿಸಿ ಹಠಹಿಡಿದು ಮನೆಯಲ್ಲೇ ಇರುತ್ತಿದ್ದನು. ಶಾಲೆಗೆ ಹೋಗದಿದ್ದರೆ ಸರಿಯಿರುವುದಿಲ್ಲ ಎಂದು ತಂದೆ ತರಾಟೆಗೆ ತೆಗೆದುಕೊಂಡಿದ್ದರಿಂದ ನೊಂದ ಆತ ನಿನ್ನೆ ತಂದೆ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯ ತೀರಿಗೆ ವೇಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರುಷನ ಮೇಲೆ ಅತ್ಯಾಚಾರ

ಬೆಂಗಳೂರು,ಜೂ.೩೦-ಮೂತ್ರ ವಿಸರ್ಜನೆಗೆ ಬಂದಿದ್ದ ಪುರುಷನೋರ್ವನ ಮೇಲೆ ಪುರುಷನೇ ಅತ್ಯಾಚಾರ ನಡೆಸಿರುವ ವಿಚಿತ್ರ ಪ್ರಕರಣ ಉಪ್ಪಾರಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮರ್ಯಾದೆಗೆ ಅಂಜಿ ಅತ್ಯಾಚಾರಕ್ಕೊಳಗಾಗಿರುವ ವ್ಯಕ್ತಿಯು ದೂರು ನೀಡದೇ ತನ್ನ ಮೇಲೆ ನಡೆದಿರುವ ಕೃತ್ಯವನ್ನು ಉಪ್ಪಾರಪೇಟೆ ಪೊಲೀಸರಿಗೆ ತಿಳಿಸಿ ಹೊರಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಕಳೆದ ಮೂರು ದಿನಗಳ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದು ಹತ್ತಿರದ ಸುಲಭ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಅವರು ಬಲವಾಗಿ ಹಿಡಿದುಕೊಂಡ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಮಂಗಳಮುಖಿಯರೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವಿಕೃತ ಕಾಮಿ ಈ ಕೃತ್ಯ ಎಸಗಿರುವುದಾಗಿ ಸಂತ್ರಸ್ಥ ವ್ಯಕ್ತಿಯು ತಿಳಿಸಿದ್ದುಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಆದರೆ ಉಪ್ಪಾರಪೇಟೆಯ ಸುತ್ತಮುತ್ತಲ ಸುಲಭ ಶೌಚಾಲಯದಲ್ಲಿ ಮಂಗಳಮುಖಿಯರ ಕಾಟ ಸಾಮಾನ್ಯ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ.

ಮಿನಿ ಬಸ್ ಡಿಕ್ಕಿ; ಯುವಕ ಸಾವು
ಬೆಂಗಳೂರು, ಜೂ. ೩೦ – ತಿರುವು ತೆಗೆದುಕೊಳ್ಳುತ್ತಿದ್ದ ಮಿನಿ ಬಸ್ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟರೆ, ಮತ್ತೊಬ್ಬ ಯುವಕ ಗಾಯಗೊಂಡಿರುವ ದುರ್ಘಟನೆ ಕೆಂಗೇರಿಯ ಪಂಚಮುಖಿ ದೇವಾಲಯದ ಬಳಿ ಇಂದು ನಸುಕಿನಲ್ಲಿ ನಡೆದಿದೆ. ಭೀಮನಕೊಪ್ಪಲುವಿನ ಚೆನ್ನಪ್ಪ (೨೨) ಮೃತಪಟ್ಟವರು. ಗಾಯಗೊಂಡಿರುವ ಪ್ರಭಾಕರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಚೆನ್ನಪ್ಪ ಮುಂಜಾನೆ ೫.೧೦ರ ವೇಳೆ ಬೈಕ್‌ನಲ್ಲಿ ಪ್ರಭಾಕರ ಅವರನ್ನು ಹಿಂಬದಿ ಕೂರಿಸಿಕೊಂಡು ಬಾಬುಸಾಬ್ ಪಾಳ್ಯದ ಕಡೆಗೆ ಹೋಗುತ್ತಿದ್ದರು.
ಮಾರ್ಗಮಧ್ಯೆ ಪಂಚಮುಖಿ ದೇವಾಲಯದ ಬಳಿ ತಿರುವು ತೆಗೆದುಕೊಳ್ಳುತ್ತಿದ್ದ ಮಿನಿ ಬಸ್ ಡಿಕ್ಕಿ ಹೊಡೆದು ಚೆನ್ನಪ್ಪ ಸ್ಥಳದಲ್ಲೇ ಮೃತಪಟ್ಟರು. ಪ್ರಕರಣ ದಾಖಲಿಸಿದ ಕೆಂಗೇರಿ ಸಂಚಾರ ಪೊಲೀಸರು ಮಿನಿ ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಕಳವು
ಬೆಂಗಳೂರು, ಜೂ. ೩೦ – ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಮಹಿಳೆಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ೭ನೇ ಕ್ರಾಸ್‌ನಲ್ಲಿ ನಡೆದಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ೭ನೇ ಕ್ರಾಸ್‌ನ ೫ನೇ ಮೇನ್‌ನ ಯಶೋಧಾ ಬಾಯಿ ಅವರು ಕಳೆದ ಜೂನ್ ೨೪ ರಂದು ಶಿವಮೊಗ್ಗಕ್ಕೆ ಕುಟುಂಬದವರೊಂದಿಗೆ ಹೋಗಿ ನಿನ್ನೆ ರಾತ್ರಿ ವಾಪಸ್ಸಾಗಿದ್ದಾರೆ.
ಊರಿಗೆ ಹೋಗುವ ಆತುರದಲ್ಲಿ ಸರಿಯಾಗಿ ಮನೆಗೆ ಲಾಕ್ ಮಾಡದೆ ಹೋಗಿದ್ದರಿಂದ ದುಷ್ಕರ್ಮಿಗಳು ಸುಲಭವಾಗಿ ಬಾಗಿಲು ಮುರಿದು ಒಳನುಗ್ಗಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.