
ಮಂಗಳೂರು, ಜೂ.30: ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿದ್ದ ಪೊದೆಗೆ ನುಗ್ಗಿದ ಘಟನೆ ತಣ್ಣೀರುಬಾವಿ ಬಳಿ ಇಂದು ಮುಂಜಾನೆ ನಡೆದಿದೆ.
ಕಾರು ಪುಟ್‌ಪಾತ್‌ಗೆ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ಪೊದೆಯೊಂದರಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಕಾರಿನಲ್ಲಿದ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ :
ದೆಹಲಿ ನೊಂದಣಿಯ ಈ ಕಾರು ತೆಂಗಿನ ಕಾಯಿ ಹೊತ್ತು ಬರುತ್ತಿದ ಗಾಡಿಯನ್ನು ಹಿಂದಕ್ಕೆ ಹಾಕುವ ರಭಸಕ್ಕೆ ಅತೀವೇಗ ಕಾರು ಚಲಾಯಿಸಿದ್ದೇ ಈ ದುರ್ಘಟನೆ ನಡೆಯಲು ಕಾರಣ ಎಂದು ತೆಂಗಿನಕಾಯಿ ವ್ಯಾಪಾರಿ ತಿಳಿಸಿದ್ದಾರೆ.
Comments are closed.