
ಇಸ್ತಾಂಬುಲ್, ಟರ್ಕಿ: ಟರ್ಕಿಯ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದ ಆತ್ಮಹತ್ಯಾ ಭಯೋತ್ಪಾದನಾ ದಾಳಿಯಲ್ಲಿ ಸುಮಾರು 32 ಮಂದಿ ಸಾವನಪ್ಪಿದ್ದಾರೆ ಹಾಗೂ 60 ಮಂದಿ ಹೆಚ್ಚು ಗಾಯಗೊಂಡಿದ್ದಾರೆ.
ಇಸ್ತಾಂಬುಲ್’ನ ಪ್ರಮುಖ ವಿಮಾನ ನಿಲ್ದಾಣವಾದ ಅತಾತುರ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನುಗ್ಗಿದ ಮೂವರು ಶಸ್ತ್ರಧಾರಿಗಳು ಯದ್ವಾತದ್ವ ಗುಂಡು ಹಾರಿಸಿದ್ದಾರೆ ಹಾಗೂ ಕನಿಷ್ಟ 2 ಅತ್ಮಹತ್ಯಾ ಬಾಂಬ್ ದಾಳಿಯನ್ನು ನಡೆಸಿದ್ದಾರೆ ಎನ್ನಲಾಗಿದೆ.

















ಅತಾತುರ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುರೋಪಿನ ಮೂರನೇ ನಿಬಿಢ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಕಳೆದ ವರ್ಷ ಸುಮಾರು 61 ಮಿಲಿಯನ್ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ.. ದಾಳಿಯ ಬಳಿಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಟರ್ಕಿ ಇತ್ತೀಚೆಗೆ ಕುರ್ದಿಶ್ ಪ್ರತ್ಯೇಕತವಾದಿ ಸಂಘಟನೆ ಅಥವಾ ಇಸಲಾಮಿಕ್ ಸ್ಟೇಟ್ ಸಂಘಟನೆಯ ಭಯೋತ್ಪಾದನಾ ಕೃತ್ಯಗಳಿಗೆ ಗುರಿಯಾಗುತ್ತಿದೆ. ಈ ವರ್ಷದಲ್ಲಿ ನಡೆದ 5 ನೇ ಭಯೋತ್ಪಾದನಾ ದಾಳಿ ಇದಾಗಿದೆ.
ಟರ್ಕಿಯ ರಾಜಧಾನಿ ಅಂಕಾರ ಹಾಗೂ ಪ್ರಮುಖ ನಗರಗಳನ್ದನು ಭಯೋತ್ಪಾದಕರು ಗುರಿಯಾಗಿಸುತ್ತಿದ್ದಾರೆ. ಕಳೆದ ಜೂನ್ 7ರಂದು ಇಸ್ತಾಂಬುಲ್’ನಲ್ಲಿ ಕುರ್ದಿಶ್ ಬಂಡುಕೋರರು ನಡೆಸಿದ್ದಾರೆನ್ನಲಾದ ಕಾರ್ ಬಾಂಬ್ ದಾಳಿಯಲ್ಲಿ 7 ಪೊಲೀಸರು ಸೇರಿದಂತೆ 11 ಮಂದಿ ಸಾವನಪ್ಪಿದ್ದರು. ಮಾರ್ಚ್ 19ರಂದು ಇಲ್ಲಿನ ನಿಬಿಢ ಶಾಪಿಂಗ್ ಪ್ರದೇಶದಲ್ಲಿ ಐಸಿಸ್ ನಡೆಸಿದೆ ಎನ್ನಲಾದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನಾಲ್ಕು ಮಂದಿ ಸಾವನಪ್ಪಿದ್ದರು. ಜನವರಿ 12ರಂದು ಸಿರಿಯನ್ ಬಾಂಬರ್’ಗಳು ಪ್ರವಾಸಿ ಸ್ಥಳವೊಂದರಲ್ಲಿ ನಡೆಸಿದ ದಾಳಿಯಲ್ಲಿ 11 ಮಂದಿ ಜರ್ಮನ್ ಪ್ರಜೆಗಳ ಸಾವನಪ್ಪಿದ್ದರು.
ರಾಜಧಾನಿ ಅಂಕಾರದಲ್ಲಿ ಕಳೆದ ಫೆಬ್ರವರಿ 17 ರಂದು ಮಿಲಿಟರಿ ಬಸ್’ಗಳ ಮೇಲೆ ನಡೆದ ದಾಳಿಯಲ್ಲಿ 29 ಮಂದಿ ಹಾಗೂ ಮಾರ್ಚ್ 13ರಂದು ನಡೆದ ಕಾರ್ ಬಾಂಬ ದಾಳಿಯಲ್ಲಿ 34 ಮಂದಿ ಸಾವನಪ್ಪಿದ್ದಾರು. ಈ ಎರಡು ದಾಳಿಗಳನ್ನು ಕುರ್ದಿಶ್ ಬಂಡುಕೋರ ಸಂಘಟನನೆ ಟಿಎಕೆ ನಡೆಸಿದೆ ಎನ್ನಲಾಗಿದೆ.
ಟರ್ಕಿ ಅಧ್ಯಕ್ಷ ತಯ್ಯಿಬ್ ಎರ್ದೊಗಾನ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಾಗೂ ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
Comments are closed.