ರಾಷ್ಟ್ರೀಯ

ಸಲ್ಮಾನ್​ ಖಾನ್​ಗೆ ಅತ್ಯಾಚಾರ ಸಂತ್ರಸ್ತೆಯಿಂದ ನೋಟಿಸ್

Pinterest LinkedIn Tumblr

sultan-webನವದೆಹಲಿ: ಸುಲ್ತಾನ್ ಚಿತ್ರದ ಕುಸ್ತಿ ಚಿತ್ರೀಕರಣದ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಪಟ್ಟ ಮಹಿಳೆಯಂತಾಗಿದ್ದೆ ಎಂಬ ಸಲ್ಮಾನ್ ಹೇಳಿಕೆ ನನಗೆ ಅಪಾರ ನೋವು ತಂದಿದೆ ಎಂದು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸಲ್ಮಾನ್ ಖಾನ್ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, 10 ಕೋಟಿ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಹೌದು, ದಬಂಗ್ ಖ್ಯಾತಿಯ ಸಲ್ಮಾನ್ ಖಾನ್ಗೆ ಅತ್ಯಾಚಾರ ಹೇಳಿಕೆ ವಿವಾದ ಜೋರಾಗಿಯೇ ಬಿಸಿ ಮುಟ್ಟಿಸುತ್ತಿದೆ. ಒಂದು ಕಡೆ ಮಹಿಳಾ ಸಂಘಟನೆಗಳ ಪ್ರತಿಭಟನೆಯಾದರೆ, ಇನ್ನೊಂದು ಕಡೆ ನ್ಯಾಯಾಂಗದ ನೋಟಿಸ್. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲರಾದ ರಜತ್ ಕಲ್ಸಾನ್ ಸಂತ್ರಸ್ತೆ ಪರ ನೋಟಿಸ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಕೀಲರು, ನನ್ನ ಕಕ್ಷಿದಾರರ ಮನಸ್ಥಿತಿ ಸಲ್ಮಾನ್ ಹೇಳಿಕೆಯಿಂದ ಇನ್ನಷ್ಟು ಘಾಸಿಗೊಂಡಿದೆ. ಇನ್ನು ಹದಿನೈದು ದಿನಗಳೊಳಗೆ ಸಂತ್ರಸ್ತೆಗೆ 10 ಕೋಟಿ ರೂ. ಪರಿಹಾರ ನೀಡಬೇಕು. ಇಲ್ಲವಾದರೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜುಲೈ 5ರಂದು ಬಿಡುಗಡೆಯಾಗಲಿರುವ ಸುಲ್ತಾನ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಮಾತನಾಡುತ್ತಾ, ಚಿತ್ರೀಕರಣದಲ್ಲಿ ಬರುವ ಕುಸ್ತಿ ಕದನಕ್ಕಾಗಿ 6 ಗಂಟೆಗೂ ಅಧಿಕ ಕಾಲ ರಿಂಗ್ನೊಳಗೆ ಕಾದಾಡಿದ್ದೇನೆ. ಈ ಸಂದರ್ಭ ಒಬ್ಬರ ಮೇಲೆ ಒಬ್ಬರು ಬಿದ್ದು ಹೊರಳಾಡಿದ್ದೇವೆ. ಇದರಿಂದಾಗಿ ನನ್ನ ಸ್ಥಿತಿ ಅತ್ಯಾಚಾರಕ್ಕೊಳಪಟ್ಟ ಮಹಿಳೆಯಂತಾಗಿತ್ತು ಎಂದು ತಿಳಿಸಿದ್ದರು.

Comments are closed.