ರಾಷ್ಟ್ರೀಯ

ಸ್ವಾಮಿ ಆರೋಪ ತಳ್ಳಿಹಾಕಿದ ಮೋದಿ

Pinterest LinkedIn Tumblr

8z3jbpcjನವದೆಹಲಿ(ಪಿಟಿಐ): ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಹಾಗೂ ಮುಖ್ಯ ಆರ್ಥಿಕ ಸಲಹೆಗಾರರ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಸಮಂಜಸ ಹೇಳಿಕೆಗಳು ಸಲ್ಲದು ಎಂದು ಚಾಟಿ ಬೀಸಿದ್ದಾರೆ.

ರಘುರಾಂ ರಾಜನ್‌ ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ವಿರುದ್ಧ ಸಂಸದ ಸುಬ್ರಮಣಿಯನ್‌ ವಾಗ್ದಾಳಿ ನಡೆಸಿದ ಬಳಿಕ ಪಕ್ಷವೂ ಸ್ವಾಮಿ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಪಕ್ಷಕ್ಕೆ ಎದುರಾಗಬಹುದಾದ ಇರಿಸು ಮುರಿಸನ್ನು ತಪ್ಪಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಕ್ಷಣ ಪ್ರತಿಕ್ರಿಯಿಸಿ, ‘ಅರವಿಂದ ಸುಬ್ರಮಣಿಯನ್‌ ಮೇಲೆ ಸರ್ಕಾರಕ್ಕೆ ಸಂಪೂರ್ಣ ವಿಶ್ವಾಸ ಇದೆ. ಕಾಲಕಾಲಕ್ಕೆ ಅವರು ಸರ್ಕಾರಕ್ಕೆ ನೀಡಿರುವ ಸಲಹೆಗಳು ಅತ್ಯಂತ ಮೌಲಿಕವಾಗಿದ್ದವು’ ಎಂದು ಹೇಳಿದ್ದರು. ಪ್ರಧಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ಸೋಮವಾರ ರಘುರಾಂ ರಾಜನ್‌ ಅವರ ಪರ ಮತಾನಾಡಿರುವ ಮೋದಿ ಅವರು, ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುವುದು ಸಲ್ಲದು. ರಾಜನ್‌ ಅವರನ್ನು ಗುರಿಯಾಗಿರಿಸಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದು ಅಸಂಬದ್ಧ. ರಾಜನ್‌ ಅವರು ದೇಶದ ಒಳಿತಿಗಾಗಿ ದುಡಿದಿದ್ದಾರೆ. ಒಬ್ಬ ದೇಶ ಭಕ್ತರಿಗೇನು ರಾಜನ್‌ ಅವರು ಕಡಿಮೆ ಇಲ್ಲ. ಅವರು ದೇಶವನ್ನು ಪ್ರೀತಿಸುತ್ತಾರೆ ಎಂದಿದ್ದಾರೆ.
ರಾಜನ್‌ ಅವರು ದೇಶಕ್ಕೆ ನೀಡಿರುವ ಕೊಡುಗೆಗೆ ಅಭಿನಂದನೆಗಳು ಎಂದಿರುವ ಮೋದಿ, ವ್ಯವಸ್ಥೆಗಿಂತ ದೊಡ್ಡವರು ಎಂದುಕೊಂಡರೆ ಅದು ತಪ್ಪು ಎಂದು ಯಾವುದೇ ಹೆಸರನ್ನು ಪ್ರಸ್ತಾಪಿಸದೆ ಸ್ವಾಮಿ ಅವರ ಹೇಳಿಕೆಗೆ ಚಾಟಿ ಬೀಸಿದ್ದಾರೆ.

Comments are closed.