ಮನೋರಂಜನೆ

ಬದ್ಮಾಶ್‌ಗೆ ಭೇಷ್

Pinterest LinkedIn Tumblr

Badmaash_157clrವಿದೇಶಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ರವಿಕಶ್ಯಪ್ ಅವರು ಮೊದಲ ಬಾರಿ ಸ್ವತಂತ್ರ ನಿರ್ಮಾಪಕರಾಗಿರುವ ಬದ್ಮಾಶ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.ಚಿತ್ರವನ್ನು ಬರುವ ಜುಲೈಗೆ ಬಿಡುಗಡೆಗೊಳಿಸಲು ಸಿದ್ದತೆ ನಡೆಲಾಗಿದ್ದು ಕಳೆದ ಸೋಮವಾರ ಚಿತ್ರದ ಹಾಡುಗಳನ್ನು ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ ಬಿಡುಗಡೆಮಾಡಲಾಯಿತು.

ಬಿಡುಗಡೆ ಸಮಾರಂಭದಲ್ಲಿ ರಂಗಿತರಂಗ,ಗೂಗ್ಲಿ, ಮಿ.ಅಂಡ್.ಮಿಸಸ್ ರಾಮಾಚಾರಿ, ಯೂ ಟರ್ನ್, ಬಹದ್ದೂರ್,ಗಜಕೇಸರಿ ಚಿತ್ರಗಳ ನೆನಪು ಬರುತ್ತಿತ್ತು.’ಬದ್ಮಾಶ್’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಲು ೮ ಮಂದಿ ಸ್ಟಾರ್ ನಿರ್ದೇಶಕರುಗಳು ಆಗಮಿಸಿದ್ದು ಕಾರಣವಾಗಿತ್ತು.

ಟ್ರೈಲರ್ ಮತ್ತು ಹಾಡುಗಳ ನಂತರ ಎಲ್ಲರೂ .’ಬದ್ಮಾಶ್’ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸನ ಚಿತ್ರದ ಕುರಿತು ಮಾತನಾಡಿ ಶುಭಕೋರಿದರು. ಪವನ್‌ಒಡೆಯರ್ ೧೨ ವರ್ಷದ ಶ್ರಮ ಇವರನ್ನು ನಿರ್ದೇಶಕರನ್ನಾಗಿ ಮಾಡಿದೆ ಎಂದರೆ,ಹಾಡುಗಳು ಬೇಗನೆ ಮನಸೆಳೆಯುತ್ತವೆ.

ಧನಂಜಯ್ ಮಾಸ್ ಲುಕ್‌ನಲ್ಲಿ ಚೆಂದ ಕಾಣಿಸ್ತ್ತಾರೆ ಅಂತ ಹೇಳಿದ್ದು ಚೇತನ್‌ಕುಮಾರ್. ಹೊಸಬರ ಚಿತ್ರಗಳು ಚೆನ್ನಾಗಿ ಪ್ರದರ್ಶನಗೊಳ್ಳುತ್ತಿರುವುದು ಸಂತಸ ತಂದಿದೆ. ಹೊಸತನದ ಅಲೆಯನ್ನು ಜನರು ಇಷ್ಟಪಡುತ್ತಿದ್ದಾರೆ.

ಟ್ರೈಲರ್‌ನಲ್ಲಿ ನಾಯಕ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರ ನೋಡಲು ಕಾತುರನಾಗಿದ್ದೇನೆ ಎಂಬ ಮಾತು ಅನೂಪ್‌ಭಂಡಾರಿ ಅವರದು. ಧನಂಜಯ್ ಮುಂದಿನ ಸ್ಟಾರ್ ಆಗುತ್ತಾರೆ ಅಂತ ಭವಿಷ್ಯ ನುಡಿದ ಸಂತೋಷ್ ಆನಂದ್‌ರಾಮ್ ಮಿ.ರಾಮಾಚಾರಿ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕೃಷ್ಣ ಎಂದು ಹೇಳಿ ಗೌರವ ಸೂಚಿಸಿದರು.

ಮೊದಲಬಾರಿ ನಿರ್ದೇಶನ ಮಾಡಿ ಅವರದೆ ಸಾಹಿತ್ಯವಿರುವ ರಾಮ ರಾಮ ಹಾಡನ್ನು ಕಷ್ಟಪಟ್ಟು ಹಾಡಿದ್ದೇನೆ ಎನ್ನುತ್ತಾರೆ ರಘುದೀಕ್ಷಿತ್. ಗ್ಯಾಪ್ ನಂತರ ಕನ್ನಡದಲ್ಲಿ ನಟನೆ ಮಾಡಿದ್ದಕ್ಕೆ ನಾಯಕಿ ಸಂಚಿತಾಶೆಟ್ಟಿ ಸಂತಸಕ್ಕೆ ಕಾರಣವಾಗಿತ್ತು.

ನಿರ್ದೇಶಕರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳುವುದಿಲ್ಲ ಅಂತ ದೂರುಗಳು ಬಂದಿರುವುದಕ್ಕೆ ಪ್ರತಿಕ್ರಿಯಿಸಿದ ಧನಂಜಯ್ ನಿರ್ದೇಶಕರು ಹೇಳಿದಂತೆ ನಟನೆ ಮಾಡುವುದು ಕಲಾವಿದರ ಕೆಲಸ. ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಸಂದರ್ಭ ಇನ್ನು ಬಂದಿಲ್ಲ.

ಅವಕಾಶಗಳನ್ನು ಬಯಸುತ್ತಿರುವ ಸಮಯದಲ್ಲಿ ಪ್ರತಿ ಶುಕ್ರವಾರ ದಿನಪತ್ರಿಕೆಯನ್ನು ನೋಡುತ್ತಾ ಯಾವ ನಿರ್ದೇಶಕರನ್ನು ಭೇಟಿ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದೆ. ಈಗ ಇವರುಗಳು ಹಿಟ್ ಸಿನಿಮಾ ನೀಡಿದ್ದಾರೆ. ಈಗಲೇ ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಲು ಸಹಿ ಮಾಡಿಕೊಡಿ. ನಿರ್ಮಾಪಕರನ್ನು ಒಪ್ಪಸುತ್ತೇನೆ ಎಂದು ಕೋರಿಕೊಂಡರು.

ಸಂಗೀತ ನಿರ್ದೇಶಕ ಜ್ಯೂಡೋಸ್ಯಾಂಡಿ, ಬಿ.ಸುರೇಶ್, ಜಾಕ್‌ಮಂಜು,ಆನಂದ್ ಆಡಿಯೋ ಶ್ಯಾಂ, ಕಿಟ್ಟಪ್ಪ ಸಿಡಿ ಬಿಡುಗಡೆಗೆ ಸಾಕ್ಷ್ಷಿಯಾಗಿದ್ದರು. ನಿರ್ಮಾಣದಲ್ಲಿ ಪಾಲುದಾರರಾಗಿದ್ದ ರವಿಕಶ್ಯಪ್ ಸ್ವತಂತ್ರ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ಬದ್ಮಾಶ್ ನೋಡಲು ಜುಲೈ ತನಕ ಕಾಯಬೇಕಾಗಿದೆ.

Comments are closed.