ರಾಷ್ಟ್ರೀಯ

ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗ ಕತ್ತರಿಸಿದ ದಲಿತ ಯುವತಿ

Pinterest LinkedIn Tumblr

seizureಮೀರತ್: ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಮರ್ಮಾಂಗವನ್ನು 17 ವರ್ಷದ ದಲಿತ ಯುವತಿ ಕತ್ತರಿಸಿದ್ದಾಳೆ.

ಮೀರತ್ ನ ಹಿಂಚೋಲಿ ಅರಣ್ಯ ಪ್ರದೇಶಕ್ಕೆ ನಿನ್ನೆ ಯುವತಿ ಚೂರಿಯೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ಯುವಕ 23 ವರ್ಷದ ರಾಯಿಸ್ ಆಕೆಯನ್ನು ಅತ್ಯಾಚಾರಿಸಲು ಮುಂದಾಗಿದ್ದಾನೆ. ಈ ವೇಳೆ ಯುವತಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಯಿಸ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ರಾಯಿಸ್ ಸ್ಥಿತಿ ಗಂಭೀರವಾಗಿದೆ.
ಯುವತಿ ದೂರಿನನ್ವಯ ಯುವಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಹಾಗೂ ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆಯಾಗಿ ಗ್ರಾಮದಲ್ಲಿ ಬಿಡುಬಿಟ್ಟಿದ್ದಾರೆ.

Comments are closed.