
ಬೆಂಗಳೂರು: ಬಾಂಗ್ಲಾದೇಶ, ಕೋಲ್ಕತ್ತಾ, ಒರಿಸ್ಸಾದಿಂದ ಹುಡುಗಿಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ಮನೆಯಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಪಶ್ಚಿಮ ಬಂಗಾಳದ ಪರಿಮಾಲ್‌ದಾಸ್, ಈತನ ಪತ್ನಿ ರೀನಾದಾಸ್, ಸುವೋಜಿತ್ ಅಧಿಕಾರಿ, ಸಂಬು ಮಾಜಿಸ ಮತ್ತು ಅರ್ನಬ್‌ದಾಸ್ ಬಂಧಿತ ಆರೋಪಿಗಳು.
ಆರೋಪಿಗಳಾದ ಪರಿಮಾಲ್ ಮತ್ತು ಈತ ಪತ್ನಿ ರೀನಾ ತಮಗೆ ಪರಿಚಯವಿರುವ ವ್ಯಕ್ತಿಗಳ ಮುಖಾಂತರ ಹೊರರಾಜ್ಯದಿಂದ ಹಾಗೂ ಬಾಂಗ್ಲಾ ದೇಶದಿಂದ ಹುಡುಗಿಯರನ್ನು 40 ರಿಂದ 50 ಸಾವಿರ ರೂ.ಗಳಿಗೆ ಖರೀದಿ ಮಾಡಿಕೊಂಡು ಕಳ್ಳಸಾಗಣೆ ಮಾಡಿಕೊಂಡು ಬೆಂಗಳೂರಿಗೆ ಕರೆತಂದು ವಾಸವಾಗಿದ್ದ ತನ್ನ ಬಾಡಿಗೆ ಮನೆಯಲ್ಲಿ ಯುವತಿಯರಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದರು. ಮೈಕೋ ಲೇಔಟ್ ವ್ಯಾಪ್ತಿಯ 1ನೆ ಮಹಡಿಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ 4 ಸಾವಿರ ಹಣ, 1 ಬೈಕ್ ವಶಪಡಿಸಿಕೊಂಡಿದ್ದಾರೆ.
Comments are closed.