ಬೆಂಗಳೂರು , ಜೂ.24: ಬಿಬಿಎಂಪಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ನಕಲಿ ಸೀಲುಗಳನ್ನು ಬಳಸಿ ನಕಲಿ ಭೂದಾಖಲೆಗಳನ್ನು ಸೃಷ್ಟಿಸುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಭಾಸ್ಕರ್(45) ಮತ್ತು ತಾವರೆಕೆರೆಯ ಮಾದೇಶ(33) ಬಂಧಿತರು. ಆರೋಪಿಗಳಿಂದ 400ಕ್ಕೂ ಅಧಿಕ ನಕಲಿ ಸೀಲುಗಳು, ಮೂರು ಪೆನ್ಡ್ರೈವ್, ಕಂಪ್ಯೂಟರ್, ಕಲರ್ ಪ್ರಿಂಟರ್ ಹಾಗೂ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಗ್ಗೆರೆಯ ಸ್ವಾತಂತ್ರ್ಯ ಯೋಧರನಗರ ಕಟ್ಟಡವೊಂದಲ್ಲಿ ಆಡಿಟಿಂಗ್ ಹೆಸರಿನಲ್ಲಿ ಕಚೇರಿ ತೆರೆದು ಸರ್ಕಾರದ ವಿವಿಧ ಇಲಾಖೆಗಳ ನಕಲಿ ಸೀಲುಗಳನ್ನು ಮಾಡಿಸಿಕೊಂಡಿದ್ದ ಆರೋಪಿಗಳು, ಇವುಗಳನ್ನು ಬಳಿಸಿಕೊಂಡು ಖಾತೆ ಇಲ್ಲದ ಭೂಮಿಗಳಿಗೆ ನಕಲಿ ಖಾತೆ, ನಕ್ಷೆ, ಪ್ಲಾನ್, ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡುತ್ತಿದ್ದರು. ಈ ನಕಲಿ ದಾಖಲೆಗಳನ್ನು ಬಳಿಸಿ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದು ವಂಚಿಸಿದ್ದರು. ಅಂತೆಯೇ ಸುಮಾರು ಒಂದು ಸಾವಿರ ಜನರಿಗೆ ನಕಲಿ ದಾಖಲೆ ಮಾಡಿಕೊಟ್ಟು ವಿವಿಧ ಬ್ಯಾಂಕ್ಗಳಲ್ಲಿ ಸಾಲ ಪಡೆದು ವಂಚಿಸಲು ನೆರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.