ಕರ್ನಾಟಕ

ಆಫೀಸ್’ನಲ್ಲಿ “ಸ್ಟ್ಯಾಂಡರ್ಡ್ ಟೈಮ್” ಕೆಲಸ ಮಾಡುಲು ಸಿಂಪಲ್ ಟಿಪ್ಸ್

Pinterest LinkedIn Tumblr

MK-CM995_FEDJOB_G_20140610184008

ಕಚೇರಿಯಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ರೂಢಿ ಇದೆ. ಭಾರತದಲ್ಲಿ ದಿನಕ್ಕೆ 8-9 ಗಂಟೆ ಕೆಲಸ ಮಾಡುವುದು ಸ್ಟ್ಯಾಂಡರ್ಡ್ ಟೈಮ್. ಖಾಸಗಿ ಕಂಪನಿಗಳಲ್ಲಿ 8-12 ಗಂಟೆಗಳವರೆಗೆ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಜಪಾನಿನಲ್ಲಿ 10-16 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಇತ್ತೀಚೆಗೆ ಈ ವಿಷಯದಲ್ಲಿ ಹೊಸದೊಂದು ಅಭಿಯಾನ ನಡೆಯುತ್ತಿದೆ. ಉದ್ಯೋಗಿಗಳು ವೈಯಕ್ತಿಕ ಬದುಕಿಗೆ ಹೆಚ್ಚು ಗಮನ ಕೊಡುವ ಪ್ರವೃತ್ತಿ ಬೆಳೆಯುತ್ತಿದೆ. ಕಚೇರಿಯ ಕೆಲಸ ಬೇಗ ಮುಗಿಸಿ ಮನೆಗೆ ಹೋಗಬೇಕೆಂಬ ವಾದ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಆಫೀಸ್’ನಲ್ಲಿ ನಮ್ಮ ಕೆಲಸಗಳನ್ನ ವಿಳಂಬವಿಲ್ಲದೇ ಮುಗಿಸುವುದು ಹೇಗೆ ಎಂಬ ಕೆಲ ಅಮೂಲ್ಯ ಸಲಹೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

1) ಮಲ್ಟಿ ಟ್ಯಾಸ್ಕಿಂಗ್ ಬೇಡ:
ಒಮ್ಮೆಗೇ ಹಲವು ಜವಾಬ್ದಾರಿಯನ್ನು ನಿಭಾಯಿಸುವ ವ್ಯಕ್ತಿ ಎಂದರೆ ಆಹಾ ಎಂದು ಉದ್ಗರಿಸುತ್ತೇವೆ. ಆತನ ಕಾರ್ಯಕ್ಷಮತೆಯನ್ನು ಕಂಡು ದಂಗಾಗುತ್ತೇವೆ. ಆದರೆ, ಮನಃಶಾಸ್ತ್ರಜ್ಞರು ಈ ಅಭಿಪ್ರಾಯವನ್ನು ತಳ್ಳಿಹಾಕುತ್ತಾರೆ. ನೀವು ಮಲ್ಟಿ ಟ್ಯಾಸ್ಕ್ ಮಾಡಲು ಹೊರಟರೆ ಏನೂ ಪ್ರಯೋಜನವಾಗುವುದಿಲ್ಲ. ಸುಮ್ಮನೆ ಕಾಲಹರಣವಾಗುತ್ತದೆ ಎಂದವರು ಹೇಳುತ್ತಾರೆ. ಆದ್ದರಿಂದ, ನೀವು ಪ್ರತೀ ದಿನ ನಿರ್ದಿಷ್ಟ ಕೆಲಸಗಳನ್ನು ಗುರಿ ಇಟ್ಟುಕೊಂಡು ಮಾಡಿ ಮುಗಿಸಲು ಯತ್ನಿಸಿ. ಆಗ ಹೆಚ್ಚು ಕೆಲಸ ಮಾಡಬಹುದು.

2) ಮೀಟಿಂಗ್ ಬೇಕಾ?
ಹಲವು ಕಾರ್ಪೊರೇಟ್ ಕಂಪನಿಗಳಿಗೆ ಮೀಟಿಂಗ್ ಎಂದರೆ ಒಂದು ರೀತಿಯ ಫ್ಯಾಷನ್. ಆದರೆ, ಇಂತಹ ಬಹುತೇಕ ಮೀಟಿಂಗ್’ಗಳು ವೃಥಾ ಕಾಲಕ್ಷೇಪವಷ್ಟೇ ಆಗಿರುತ್ತವೆ. ಗಂಟೆಗಟ್ಟಲೆ ಸಮಯದ ವ್ಯಯವಾಗುತ್ತದೆ. ಆದರೆ, ಇಲ್ಲಿ ನಿರ್ದಿಷ್ಟ ನಿರ್ಧಾರಗಳು ಬರುವುದು ಅಪರೂಪ. ನೀವು ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕೆಂದರೆ ಮೀಟಿಂಗ್ ಕಡಿಮೆ ಮಾಡಿರಿ. ತಂಡದವರೆಲ್ಲರೂ ಸೇರಿ ಮಾತನಾಡಲೇಬೇಕೆಂದಿದ್ದರೆ ಹಾಗೆ ಸುಮ್ಮನೆ ಒಂದು ಕಡೆ ಗುಂಪುಗೂಡಿ ನಿಂತುಕೊಂಡೇ ಚರ್ಚಿಸಿ. ಆಗ ಬಹಳ ನಿರ್ದಿಷ್ಟ ರೀತಿಯಲ್ಲಿ ಕಡಿಮೆ ಸಮಯದಲ್ಲಿ ಮೀಟಿಂಗ್ ನಡೆಯುತ್ತದೆ. ನಿಮಗೆ ಸಮಯವೂ ಉಳಿಯುತ್ತದೆ.

3) ಆಗಾಗ ಬ್ರೇಕ್ ತೆಗೆದುಕೊಳ್ಳಿ:
ಒಂದೇ ಸಮನೆ ಗಂಟೆಗಟ್ಟಲೆ ಕೆಲಸ ಮಾಡಿದರೆ ಮಾನಸಿಕ ಮತ್ತು ದೈಹಿಕ ಜಡತ್ವ ತೋರಬಹುದು. ಹೀಗಾಗಿ, ಸುಮಾರು 90 ನಿಮಿಷಕ್ಕೊಮ್ಮೆ ನಿಮ್ಮ ಸೀಟಿನಿಂದ ಎದ್ದು ಒಂದೈದು ನಿಮಿಷ ಹೊರಗೆ ಹೋಗಿ ಬನ್ನಿ. ನಿಮ್ಮ ಮನಸು ಹಗುರವಾಗುತ್ತದೆ. ನೀವು ಹೆಚ್ಚು ಪರಿಣಾಮಕಾರಿಯಾಗಿ ಫೋಕಸ್ ಮಾಡಬಹುದು. ದೈಹಿಕ ಆರೋಗ್ಯಕ್ಕೂ ಇದು ಸಹಕಾರಿ.

4) ಭೋಜನ ಮಿತವಾಗಿರಲಿ:
ನಿಮ್ಮ ಮಧ್ಯಾಹ್ನದ ಭೋಜನ ಹೆಚ್ಚಾಗಿರದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲಸ ಮಾಡಲು ಆಲಸ್ಯ ಮನೋಭಾವ ಬೆಳೆಯುವ ಅಪಾಯವಿರುತ್ತದೆ. ಪ್ರೋಟೀನ್, ಫೈಬರ್ ಮತ್ತು ಆಯಂಟಿ-ಆಕ್ಸಿಡೆಂಟ್ಸ್ ಹೆಚ್ಚಾಗಿರುವ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.

Comments are closed.