ಉಡುಪಿ: ಇಲ್ಲಿನ ಭುಜಂಗ ಪಾರ್ಕ್ ಬಳಿ ವ್ಯಕ್ತಿಯೋರ್ವ ರಿವಾಲ್ವರ್ ಹಿಡಿದು ತಿರುಗುತ್ತಿರುವ ಬಗ್ಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸರು ಪಿಸ್ತೂಲ್ ಹಾಗೂ ಸಜೀವ ಗುಂಡು ಸಮೇತ ಆರೋಪಿಯನ್ನು ವಶಕ್ಕೆ ಪಡೇದಿದ್ದಾರೆ.
ಉಡುಪಿ ಬೈಲಕೆರೆ ನಿವಾಸಿ ರಾಘವೇಂದ್ರ ಕಾಂಚನ್ (30) ಬಂಧಿತ ಆರೋಪಿ.

ಉಡುಪಿ ಬೈಲಕೆರೆ ರಾಘವೇಂದ್ರ ಕಾಂಚನ್ ಎಂಬವನು ಒಂದು ರಿವಾಲ್ವರ್ ಹಿಡಿದುಕೊಂಡು ತಿರುಗಾಡುತ್ತಿರುವುದಾಗಿ ಖಚಿತ ಮಾಹಿತಿ ಪಡೆದು ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್ ಜೈಶಂಕರ್ ಹಾಗೂ ಉಡುಪಿ ಡಿ.ಸಿ.ಬಿ ವಿಭಾಗದ ಪೊಲೀಸ್ ನಿರೀಕ್ಷಕ ರತ್ನಕುಮಾರ್ ಹಾಗೂ ಸಿಬ್ಬಂದಿಗಳು ಉಡುಪಿ ಭುಜಂಗ ಪಾರ್ಕ್ ಬಳಿ ದಾಳಿ ನಡೆಸಿ ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.
6 ಸಜೀವ ಗುಂಡು (ರೌಂಡ್ಸ್)ಗಳಿದ್ದ ಪಿಸ್ತೂಲ್ ಇದಾಗಿದ್ದು ಸ್ವಾಧೀನಪಡಿಸಿಕೊಂಡ ಪಿಸ್ತೂಲ್ ಅಂದಾಜು ಮೌಲ್ಯ 75,000ರೂ ಆಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ರೋಸಾರಿಯೋ ಡಿಸೋಜ, ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್‌ಕುಮಾರ್ ಬೈಂದೂರು, ಶಿವಾನಂದ, ದಯಾನಂದ ಮತ್ತು ವಾಹನ ಚಾಲಕ ರಾಘವೇಂದ್ರ, ನವೀನಚಂದ್ರರವರು ಪಾಲ್ಗೊಂಡಿರುತ್ತಾರೆ.
ಉಡುಪಿ ಎಸ್ಪಿ ಕೆ.ಅಣ್ಣಾಮಲೈ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ವಿಷುವರ್ಧನ, ಉಡುಪಿ ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.