ನವದೆಹಲಿ: ಕ್ರೀಡಾ ಸಚಿವ ಜಯರಾಜನ್ ತಮಗೆ ಮತ್ತು ಕೇರಳ ಕ್ರೀಡಾ ಮಂಡಳಿಯ ಇತರ ಸದಸ್ಯರಿಗೆ ಕಿರುಕುಳ ನೀಡಿದ್ದಾರೆಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಆರೋಪಿದ ಕೆಲವು ದಿನಗಳಲ್ಲೇ ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷೆ ಹುದ್ದೆಯಿಂದ ಅಂಜು ಕೆಳಕ್ಕಿಳಿದಿದ್ದಾರೆ.
ಮಂಡಳಿಯ ವಾಲಿಬಾಲ್ ಆಟಗಾರ್ತಿ ಟಾಮ್ ಜೋಸೆಫ್ ಸೇರಿದಂತೆ ಇತರೆ ಕ್ರೀಡಾ ಮಂಡಳಿ ಸದಸ್ಯರೂ ಕೂಡ ಹುದ್ದೆಯನ್ನು ತ್ಯಜಿಸುವ ನಿರೀಕ್ಷೆಯಿದೆ. ಜಯರಾಜನ್‌ಗೆ ಬರೆದ ಮುಕ್ತ ಪತ್ರದಲ್ಲಿ ಕೇರಳ ಕ್ರೀಡಾ ಮಂಡಳಿಯ ಕಳೆದ 10 ವರ್ಷಗಳ ಚಟುವಟಿಕೆಗಳ ಕುರಿತು ಆಮೂಲಾಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಮಂಡಳಿಯ ಅಧ್ಯಕ್ಷೆಯಾಗಿ ನೇಮಕವಾಗಿದ್ದ ಅಂಜು ಅಧಿಕಾರ ವಹಿಸಿಕೊಂಡ ಬಳಿಕ ಸಚಿವರ ಭೇಟಿಗೆ ತೆರಳಿದ್ದಾಗ ಸಚಿವರು ತರಾಟೆಗೆ ತೆಗೆದುಕೊಂಡಿದ್ದರು.
ಅವರ ಕಾಲಾವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆಯೆಂದು ಸಚಿವರು ಅಂಜುಗೆ ಹೇಳಿದ್ದರು. ಮಾಧ್ಯಮ ಈ ವಿಷಯವನ್ನು ದೊಡ್ಡದು ಮಾಡಿದಾಗ ಕ್ರೀಡಾ ಮಂಡಳಿಯ ಮಾಜಿ ಅಧ್ಯಕ್ಷ ದಾಸನ್ ಜಾರ್ಜ್ ನೇತೃತ್ವದಲ್ಲಿ ಸೂಕ್ತ ರೀತಿಯಲ್ಲಿ ಆಡಳಿತ ನಡೆಯಲಿಲ್ಲ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್ ತಾವು ಕೇವಲ 6 ತಿಂಗಳಿಂದ ಮಂಡಳಿಯ ಅಧ್ಯಕ್ಷೆಯಾಗಿದ್ದೆ. ಕೇವಲ 6 ತಿಂಗಳಿಗೆ ತನಿಖೆಯನ್ನು ಸೀಮಿತಗೊಳಿಸದೇ ಕಳೆದ ಒಂದು ದಶಕದ ಮಂಡಳಿ ಚಟುವಟಿಕೆ ಕುರಿತು ತನಿಖೆ ಮಾಡಲಿ ಎಂದು ಅಂಜು ಹೇಳಿದ್ದರು.
Comments are closed.