ಕರ್ನಾಟಕ

ನಾಯಕತ್ವ ಬದಲಾವಣೆಗಾಗಿ ಅತೃಪ್ತರ ಪರೋಕ್ಷ ಒತ್ತಾಯ

Pinterest LinkedIn Tumblr

sriಬೆಂಗಳೂರು: ಶಾಸಕ ಅಂಬರೀಷ್ ಅವರ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್ ಫ್ಲಾಟ್ ನಲ್ಲಿ ಕಾಂಗ್ರೆಸ್ ಪಕ್ಷದ ಅತೃಪ್ತ ನಾಯಕರು ಮಂಗಳವಾರ ಸಭೆ ನಡೆಸಿದ್ದಾರೆ. ಅಂಬರೀಷ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವಿ ಶ್ರೀನಿವಾಸ ಪ್ರಸಾದ್ ಅವರು, ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೇ ಹೇಳುವುದಕ್ಕಾಗುವುದಿಲ್ಲ. ನೀವೇ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಅದೇ ವೇಳೆ ಇವತ್ತು ಅಸಮಾಧಾನ ಇರುವವರೆಲ್ಲ ಒಟ್ಟಿಗೆ ಸೇರಿಕೊಂಡಿದ್ದೇವೆ. ಆದರೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ. ಇದುವರೆಗೆ ಮುಖ್ಯಮಂತ್ರಿಯವರು ನನ್ನ ಜತೆ ಮಾತನಾಡಲಿಲ್ಲ. ನಾನೂ ಅವರೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ.
ನಮ್ಮದು ಬಂಡಾಯ ಅಲ್ಲ, ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಅಂಬರೀಷ್ ಅವರ ಜತೆಗೆ ಎಲ್ಲ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿದ್ದೇವೆ. ಎಲ್ಲದಕ್ಕೂ ಟೈಮ್ ಇದೆ ಕಾದು ನೋಡಿ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

Comments are closed.