ಬೆಂಗಳೂರು, ಜೂ. ೨೨ – ಸಚಿವ ಸಂಪುಟ ಪುನಾರಚನೆ ಖಾತೆಗಳ ಹಂಚಿಕೆ ಮಾಡಿದ ನಂತರ ಕೆಲವು ಜಿಲ್ಲೆಗಳ ಉಸ್ತುವಾರಿ ಸಚಿವರನ್ನೂ ಬದಲಾವಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಬದಲಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ,ಮೈಸೂರು ವಿ.ಶ್ರೀನಿವಾಸ ಪ್ರಸಾದ್ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಮಂಡ್ಯದಲ್ಲಿ ಅಂಬರೀಶ್ ಜಾಗಕ್ಕೆ ಇಂಧನ ಸಚಿಚ ಡಿ.ಕೆ ಶಿವಕುಮಾರ್ಗೆ ವಹಿಸಲಾಗಿದ್ದು ಅವರಿಗೆ ರಾಮನಗರ ಉಸ್ತುವಾರಿಯ ಹೊಣೆಗಾರಿಕೆಯನ್ನೂ ನೀಡಲಾಗಿದೆ.
ಕೋಲಾರದಲ್ಲಿ ಯು.ಟಿ ಖಾದರ್ ಬದಲಿಗೆ ರಮೇಶ್ ಕುಮಾರ್, ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಬದಲಿಗೆ ಎಸ್.ಎಸ್ ಮಲ್ಲಿಕಾರ್ಜುನ, ಕೊಪ್ಪಳದಲ್ಲಿ ಶಿವರಾಜ್ ತಂಗಡಗಿ ಬದಲಿಗೆ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಜಿಲ್ಲಾ ಉಸ್ತುವಾರಿ ಸಚಿವರನ್ನೂ ಬದಲಾಯಿಸಲಾಗಿದೆ.
ಇನ್ನೂ ಕೆಲವು ಜಿಲ್ಲೆಗಳಿಗೆ ಹೊಸ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ ಅದರಲ್ಲಿ ಈಶ್ವರ್ ಖಂಡ್ರೆಗೆ ಬೀದರ್, ಯಾದಗಿರಿಗೆ ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್ಗೆ ಉಡುಪಿ, ಕೊಡಗಿಗೆ ಎಂ.ಆರ್ ಸೀತಾರಾಮ್ ಸೇರಿದಂತೆ ಕೆಲವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನೂತನ ಜಿಲ್ಲಾ ಉಸ್ತುವಾರಿ ಸಚಿವರ ವಿವರ
* ಶಿವಮೊಗ್ಗ- ಕಾಗೋಡು ತಿಮ್ಮಪ್ಪ
* ಕೋಲಾರ- ರಮೇಶ್ ಕುಮಾರ್
* ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ್
* ಮಂಡ್ಯ ಮತ್ತು ರಾಮನಗರ- ಡಿ.ಕೆ ಶಿವಕುಮಾರ್
* ಮೈಸೂರು-ಡಾ.ಎಚ್.ಸಿ ಮಹದೇವಪ್ಪ
* ಕೊಡಗು- ಎಂ.ಆರ್ ಸೀತಾರಾಮ್
* ಉಡುಪಿ- ಪ್ರಮೋದ್ ಮಧ್ವರಾಜ್
* ಹಾವೇರಿ- ರುದ್ರಪ್ಪ ಲಮಾಣಿ
* ಕೊಪ್ಪಳ- ಬಸವರಾಜ್ ರಾಯರೆಡ್ಡಿ
* ಬಾಗಲಕೋಟೆ- ಹೆಚ್.ವೈ ಮೇಟಿ
* ಚಿಕ್ಕಬಳ್ಳಾಪುರ- ರಾಮಲಿಂಗಾರೆಡ್ಡಿ
* ಬೀದರ್- ಈಶ್ವರ್ ಖಂಡ್ರೆ
* ಯಾದಗಿರ್-ಪ್ರಿಯಾಂಕ್ ಖರ್ಗೆ
* ಕಲಬುರಗಿ- ಡಾ.ಶರಣ್ ಪ್ರಕಾಶ್ ಪಾಟೀಲ್
* ಬೆಳಗಾವಿ -ರಮೇಶ್ ಜಾರಕಿಹೊಳಿ
* ರಾಯಚೂರು- ತನ್ವೀರ್ ಸೇಠ್
* ಬಳ್ಳಾರಿ- ಸಂತೋಷ್ ಲಾಡ್
ಇನ್ನುಳಿದಂತೆ
* ಡಾ.ಜಿ ಪರಮೇಶ್ವರ- ಚಿಕ್ಕಮಗಳೂರು
* ತುಮಕೂರು- ಟಿ.ಬಿ ಜಯಚಂದ್ರ
* ಬೆಂಗಳೂರು ನಗರ- ಕೆ.ಜೆ ಜಾರ್ಜ್
* ಬೆಂಗಳೂರು ಗ್ರಾಮಾಂತರ- ಕೃಷ್ಣ ಬೈರೇಗೌಡ
* ಚಿತ್ರದುರ್ಗ- ಎಚ್.ಆಂಜನೇಯ
* ವಿಜಯಪುರ – ಎಂ.ಬಿ ಪಾಟೀಲ್
* ಚಾಮರಾಜ ನಗರ- ಎಚ್.ಎಸ್ ಮಹದೇವ ಪ್ರಸಾದ್
* ಗದಗ- ಎಚ್.ಕೆ ಪಾಟೀಲ್
* ದಕ್ಷಿಣ ಕನ್ನಡ- ರಮಾನಾಥ ರೈ
* ಉತ್ತರ ಕನ್ನಡ- ಆರ್.ವಿ ದೇಶಪಾಂಡೆ
* ಧಾರವಾಡ – ವಿನಯ್ ಕುಲಕರ್ಣಿ
* ಹಾಸನ -ಎ.ಮಂಜು
ಕರ್ನಾಟಕ
Comments are closed.