ಬೆಂಗಳೂರು,ಜೂ.೨೨-ಹಿರಿಯ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಪೊಲೀಸರು ಸೇವಕರಾಗಿ ಕೆಲಸ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿರುವ ಅಧಿಕಾರಿಯ ಪುತ್ರನ ವಿವಾಹದಲ್ಲಿ ಪೊಲೀಸರು ಕೂಲಿಗಳಂತೆ ಕೆಲಸ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ
ಪರಿಸರ ಪ್ರೇಮಿ ಎನ್ನುವುದನ್ನು ತೋರಿಸಿಕೊಳ್ಳಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ಓಂಪ್ರಕಾಶ್ ಅವರು ಕಳೆದ ಜೂ೧೮ರಂದು ಆರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆದ ತಮ್ಮ ಪುತ್ರ ಕಾರ್ತಿಕೇಶ್ ಅವರ ಆರತಕ್ಷತೆಗೆ ಬಂದ ಅತಿಗಣ್ಯರಿಗೆ ಉಡುಗೊರೆಯಾಗಿ ಸಸಿ ಕೊಡುವುದಕ್ಕೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಜೂ.೧೫ರಂದು ನಡೆದಿದ್ದ ವಿವಾಹದ ಅರತಕ್ಷತೆಗೆ ಬಂದ ಅತಿಥಿ ಗಣ್ಯರಿಗೆ ಪೊಲೀಸ್ ಸಿಬ್ಬಂದಿಯನ್ನು ಓಂಪ್ರಕಾಶ್ ಅವರು ಸಸಿ ನೀಡಲು ಬಳಸಿಕೊಂಡಿದ್ದಾರೆ,ಲಕ್ಷಗಟ್ಟಲೇ ಹಣ ಖರ್ಚು ಮಾಡಿ, ಅರಮನೆ ಮೈದಾನದಲ್ಲಿ ಮದುವೆ ಮಾಡಿದ ಓಂಪ್ರಕಾಶ್ ಅವರು ಸಸಿಕೊಡೋಕೆ ಬೇರೆ ಕಾರ್ಮಿಕರನ್ನು ಬಳಸಿಕೊಳ್ಳಬಹುದಿತ್ತು.
ಆದರೆ ಕೂಲಿ ಕೇಳದೇ ಕೆಲಸ ಮಾಡೋರು ಸಿಕ್ಕರೆ ಯಾರಿಗೆ ಬೇಡ ನನಗೂ ಇರಲಿ, ನಮ್ಮ ಮನೆಗೂ ಇರಲಿ ಅನ್ನೊ ಬುದ್ದಿ ತೋರಿರುವ ಓಂಪ್ರಕಾಶ್ ಅವರು ಪೊಲೀಸ್ ಸಿಬ್ಬಂದಿಯನ್ನೇ ಬಳಸಿಕೊಂಡಿದ್ದಾರೆ.
ಆಶ್ಚರ್ಯವೆಂದರೆ ಮದುವೆಗೆ ಹೋಗಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಫೋಟೋಗೆ ಚೆನ್ನಾಗಿ ಪೋಸ್ನೀಡಿ ಪೊಲೀಸ್ ಸಿಬ್ಬಂದಿಯಿಂದ ಸಸಿ ಉಡುಗೊರೆ ಪಡೆದು ಮರಳಿದ್ದಾರೆ.
ಕರ್ನಾಟಕ
Comments are closed.