
ಬೆಂಗಳೂರು: ಕಾರು ಖರೀದಿಸುವ ಸೋಗಿನಲ್ಲಿ ಬಂದ ಯುವಕನೊಬ್ಬ, ಟೆಸ್ಟ್ ಡ್ರೈವ್ ನೆಪದಲ್ಲಿ ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಕಾರು ಕದ್ದೊಯ್ದಿರುವ ಘಟನೆ ವೈಟ್ಫೀಲ್ಡ್ ಸಮೀಪದ ಹೂಡಿಯಲ್ಲಿ ನಡೆದಿದೆ. ಈ ಸಂಬಂಧ ವಂಚನೆಗೊಳಗಾದ ಅಭಿಷೇಕ್ ಕುಮಾರ್ ಎಂಬುವರು ವೈಟ್ಫೀಲ್ಡ್ ಠಾಣೆಗೆ ದೂರು ಕೊಟ್ಟಿದ್ದಾರೆ.
‘ನನ್ನ ಕಾರನ್ನು ಮಾರಾಟ ಮಾಡುತ್ತಿರುವ ಬಗ್ಗೆ ಆನ್ಲೈನ್ನಲ್ಲಿ ಜಾಹೀರಾತು ಪ್ರಕಟಿಸಿದ್ದೆ. ಜೂನ್ 15ರಂದು 889****490 ಮೊಬೈಲ್ ಸಂಖ್ಯೆಯಿಂದ ನನಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಕಾರು ಖರೀದಿಸಲು ಇಚ್ಛಿಸಿರುವುದಾಗಿ ಹೇಳಿದ್ದ’ ಎಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ.
‘ನಾನು ಹೇಳಿದಂತೆ ಶನಿವಾರ ಸಂಜೆ ಹೂಡಿಗೆ ಬಂದಿದ್ದ ಆತ, ಶಂಕರ್ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡ. ಟೆಸ್ಟ್ ಡ್ರೈವ್ ಮಾಡಬೇಕು ಎಂದಿದ್ದರಿಂದ ಎರಡು ಸುತ್ತು ಚಾಲನೆ ಮಾಡಲು ಕೊಟ್ಟಿದ್ದೆ. ಆ ನಂತರ ನನಗೆ ಚಾಲನೆ ಮಾಡುವಂತೆ ಹೇಳಿದ. ನಾನು ಕೆಳಗಿಳಿದು ಚಾಲಕನ ಸೀಟಿನತ್ತ ಬರುವಷ್ಟರಲ್ಲಿ ಆತ ವಾಹನ ಚಲಾಯಿಸಿಕೊಂಡು ಪರಾರಿಯಾದ’ ಎಂದು ಅವರು ದೂರಿದ್ದಾರೆ.
‘ಅಪರಿಚಿತ ವ್ಯಕ್ತಿಯೊಬ್ಬ ಕಾರು ಖರೀದಿಸಲು ಬಂದಿದ್ದರಿಂದ ಆತನ ಚಲನವಲನಗಳನ್ನು ಕುಟುಂಬ ಸದಸ್ಯ ರೊಬ್ಬರು ಹ್ಯಾಂಡಿ ಕ್ಯಾಂನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಮಾಹಿತಿ ಆಧರಿಸಿ ನನ್ನ ಕಾರನ್ನು ಪತ್ತೆ ಮಾಡಿಕೊಡಿ ಹಾಗೂ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
ಠಾಣೆಗಳಿಗೆ ಮಾಹಿತಿ: ‘ಕ್ಯಾಮೆರಾದಲ್ಲಿ ಆ ಯುವಕನ ಚಹರೆ ಸ್ಪಷ್ಟವಾಗಿ ದಾಖ ಲಾಗಿದೆ. ಅದನ್ನು ಎಲ್ಲ ಠಾಣೆಗಳಿಗೂ ಫ್ಯಾಕ್ಸ್ ಮೂಲಕ ಕಳುಹಿಸಲಾಗಿದೆ. ಆರೋಪಿ ವಂಚಿಸಿರುವ ಪರಿ ಗಮನಿಸಿ ದರೆ, ಆತ ಇದೇ ಪ್ರವೃತ್ತಿವು ಳ್ಳವನು ಎಂಬಂತೆ ಕಾಣುತ್ತದೆ. ಹಿರಿಯ ಅಧಿಕಾ ರಿಯೊಬ್ಬರು ಮಾಹಿತಿ ನೀಡಿದರು.
Comments are closed.