ರಾಷ್ಟ್ರೀಯ

ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 6 ವರ್ಷದ ಬಾಲಕಿಗೆ ಪ್ರಧಾನಿ ಮೋದಿ ಬರೆದ ಪತ್ರದಲ್ಲಿ ಏನಿತ್ತು…?

Pinterest LinkedIn Tumblr

vaishali

ಪುಣೆ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ವೈಶಾಲಿಗೆ ಪ್ರಧಾನಮಂತ್ರಿ ಕಚೇರಿ ಸಹಾಯದಿಂದ ಕಳೆದ ವಾರವಷ್ಟೇ ಶಸ್ತ್ರಕ್ರಿಯೆ ನಡೆದಿತ್ತು.

ಹೃದಯದಲ್ಲಿ ರಂಧ್ರವಿದ್ದು ಅದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ, ಆದರೆ ತಮ್ಮ ಪೋಷಕರು ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದು, ತನಗೆ ಶಸ್ತ್ರ ಚಿಕಿತ್ಸೆಗೆ ನೆರವು ನೀಡಬೇಕು ಎಂದು ಜನವರಿಯಲ್ಲಿ ವೈಶಾಲಿ ಯಾದವ್ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಳು. ನಂತರ ಪತ್ರದ ವಿಳಾಸ ಪಡೆದ ಪ್ರಧಾನಿ ಕಾರ್ಯಾಲಯ ಆಕೆಗೆ ನೆರವು ನೀಡುವಂತೆ ಪುಣೆಯ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಜೂನ್ 2 ರಂದು ವೈಶಾಲಿಗೆ ಶಸ್ತ್ರ ಚಿಕಿತ್ಸೆ ನಡೆಯಿತು.

ವೈಶಾಲಿಯ ಪುಟ್ಟ ಮನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಸಹಿ ಇರುವ ಇನ್ನೊಂದು ಪತ್ರ ಬಂದಿತ್ತು. ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ದೇಶಕ್ಕೆ ಹೆಮ್ಮೆತರುವಂತೆ ಪ್ರಧಾನಿ ತಮ್ಮ ಪತ್ರದ ಮೂಲಕ ವೈಶಾಲಿಗೆ ಶುಭಕೋರಿದ್ದಾರೆ.

ತನ್ನ ಮೊದಲ ಪತ್ರದಲ್ಲಿ ವೈಶಾಲಿ ತನಗೆ ಹೃದಯ ಸಮಸ್ಯೆ ಇದ್ದು ಶಸ್ತ್ರಕ್ರಿಯೆಗೆ ಸಹಾಯ ಮಾಡುವಂತೆ ಪ್ರಧಾನಿ ಕಚೇರಿಗೆ ವಿನಂತಿಸಿದ್ದಳು. ಶಸ್ತ್ರಕ್ರಿಯೆ ನಂತರ ಪುನಃ ಪ್ರಧಾನಿಗೆ ಕೃತಜ್ಞತೆಯನ್ನು ತಿಳಿಸಲು ಪತ್ರ ಮತ್ತು ಅದರ ಜತೆ ತಾನೇ ಬಿಡಿಸಿದ ಚಿತ್ರವನ್ನೂ ಲಗ್ತತಿಸಿ ಕಳುಹಿಸಿದ್ದಳು.

Comments are closed.