ಬೆಂಗಳೂರು,ಜೂ.೨೧-ಮೂರು ದಿನಗಳ ಹಿಂದೆ ನಡೆದಿದ್ದ ಬಸವನಗುಡಿಯ ಎಂಡಿ ಬ್ಲಾಕ್‌ನ ಸಯ್ಯದ್ ಉನ್ನಿಸಾ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ದಕ್ಷಿಣ ವಿಭಾಗದ ಪೊಲೀಸರು ಕೃತ್ಯ ನಡೆಸಿದ್ದ ಆಕೆಯ ಆಳಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀಲಸಂದ್ರದ ಆರ್.ಕೆ. ಗಾರ್ಡನ್ ಮೊಹಮ್ಮದ್ ಆಖಿಲ್ ಉರ್ ರೆಹಮಾನ್(೩೮)ಬಂಧಿತ ಆರೋಪಿಯಾಗಿದ್ದಾನೆ.ಅತ್ತೆಯ ಮಾಟ ಮಂತ್ರಕ್ಕೆ ಹೆದರಿ ಹಾಗೂ ಕೇಳಿದಾಗ ಹಣ ಕೊಡದ ಹಿನ್ನಲೆಯಲ್ಲಿ ಮಾವ ಕೆಲಸಕ್ಕೆ ಹೋಗಿ ಒಂಟಿಯಾಗಿದ್ದ ಮನೆಗೆ ನಕಲಿ ಕೀ ಬಳಸಿ ನುಗ್ಗಿ ಅತ್ತೆ ಸಯ್ಯದ್ ಉನ್ನಿಸಾ(೫೪)ಅವರನ್ನು ಚಾಕು, ಇಸ್ತ್ರಿ ಪೆಟ್ಟಿಗೆಯಿಂದ ಹೊಡೆದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದು ವಿವಸ್ತ್ರಗೊಳಿಸಿ ಪರಾರಿಯಾಗಿದ್ದನು.
ಅಫ್ಜಲ್ ಅಹಮದ್ ಅವರು ಕಳೆದ ಜೂ.೧೮ ರಂದು ಖಾಸಗಿ ಕಂಪನಿಯಲ್ಲಿನ ಕೆಲಸ ಮುಗಿಸಿಕೊಂಡು ವಾಪಸ್ ರಾತ್ರಿ ೭-೪೫ ಗಂಟೆಗೆ ಬಂದಾಗ ಮನೆಯಲ್ಲಿ ಒಂಟಿಯಾಗಿದ್ದ ಪತ್ನಿ ಸಯ್ಯದ್ ಉನ್ನಿಸಾ ಬಾಗಿಲು ತೆರೆಯದಿದ್ದಾಗ ತನ್ನ ಬಳಿಯಿದ್ದ ಕೀಯಿಂದ ಬಾಗಿಲು ತೆಗೆದು ನೋಡಿದಾಗ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ವಿವಸ್ತ್ರಳಾಗಿ ಕೊಲೆಯಾಗಿ ಅಂಗಾತವಾಗಿ ಬಿದ್ದಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಮೂರು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ಕೈಗೊಂಡು ಆರೋಪಿ ಮೊಹಮ್ಮದ್ ಆಖಿಲ್ ಉರ್ ರೆಹಮಾನ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಯಾದ ಸಯ್ಯದ್ ಉನ್ನಿಸಾ ಬೇರೆಯವರಿಂದ ಮಾಟ ಮಂತ್ರ ಮಾಡಿಸುತ್ತಿದ್ದು,ನನಗೂ ನನ್ನ ಮಕ್ಕಳಿಗೂ ಮತ್ತು ಮಾಟ ಮಂತ್ರ ಮಾಡಿಸಿ ತೊಂದರೆ ಕೊಡುತ್ತಿದ್ದರಿಂದ ಅಲ್ಲದೇ ಆಗಾಗ್ಗೆ ಹಣ ಕೊಡುತ್ತಿದ್ದನ್ನು ನಿಲ್ಲಿಸಿದ್ದರಿಂದ ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೇ ಬೇಸತ್ತು ಕೊಲೆ ಮಾಡಿದ್ದಾಗಿ ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಕೊಲೆಗೆ ಸಂಚು ರೂಪಿಸಿದ್ದ ಆರೋಪಿ ಅತ್ತೆಯ ಮನೆಯ ನಕಲಿ ಕೀಯನ್ನು ಮಾಡಿಸಿಕೊಂಡು ಮಾವ ಮನೆಯ ಬೀಗವನ್ನು ಹಾಕಿಕೊಂಡು ಹೋದ ಮೇಲೆ ಅತ್ತೆ ಒಬ್ಬಳೇ ಇರುವುದನ್ನು ಖಾತ್ರಿ ಪಡಿಸಿಕೊಂಡು ನಕಲಿ ಕೀಯಿಂದ ಮನೆಯ ಬಾಗಿಲನ್ನು ತೆಗೆದು ಮನೆಯ ಒಳಗೆ ಹೋಗಿ ಮಲಗಿದ್ದ ಅತ್ತೆಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಹೇಳಿದರು.
ಜಯನಗರ ಎಸಿಪಿ .ಜಿ.ಎಂ.ಕಾಂತರಾಜ್ ಬಸವನಗುಡಿ ಪೊಲೀಸ್ ಇನ್ಸ್‌ಪೆಕ್ಟರ್ .ಎಸ್.ಡಿ.ಶಶಿಧರ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
Comments are closed.