
ಚಂಡೀಗಡ (ಪಿಟಿಐ): ಚಂಡೀಗಡದ ಕ್ಯಾಪಿಟಲ್ ಕಾಂಪ್ಲೆಕ್ಸ್ನಲ್ಲಿ ಏರ್ಪಡಿಸಿದ್ದ 2ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮೋದಿ ಅವರೊಟ್ಟಿಗೆ ಯೋಧರು, ಮಕ್ಕಳು ಸೇರಿದಂತೆ ಸುಮಾರು 30 ಸಾವಿರ ಮಂದಿ ಸಾಮೂಹಿಕವಾಗಿ ಯೋಗ ಮಾಡಿದರು. ಮೋದಿ ಅವರು ಅರ್ಧಚಕ್ರಾಸನ, ತ್ರಿಕೋನಾಸನ, ವಕ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದರು.


ನಂತರ ಮಾತನಾಡಿದ ಮೋದಿ, ‘ಇಡೀ ವಿಶ್ವ ಇಂದು ಯೋಗ ಮಾಡುತ್ತಿದೆ. ಯೋಗಕ್ಕೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಸಾಮಾನ್ಯರು ಸಹ ಯೋಗ ಮಾಡಬಹುದು’ ಎಂದರು.
‘ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಅಂತರರಾಷ್ಟ್ರೀಯ ಯೋಗ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ನೀಡಲಾಗುವುದು’ ಎಂದು ಮೋದಿ ಹೇಳಿದರು.
Comments are closed.