ಕರ್ನಾಟಕ

ಸಂಪುಟದಿಂದ ಕೈ ಬಿಟ್ಟ ವಿಚಾರ; ಅಂಬರೀಶ್ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗ; ನಾಳೆ ಚಿತ್ರೋಧ್ಯಮ ಬಂದ್ ಗೆ ಕರೆ

Pinterest LinkedIn Tumblr

amba

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ನಿಮಿತ್ತ ಸಚಿವ ಅಂಬರೀಶ್ ರನ್ನು ಸಂಪುಟದಿಂದ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ನಾಳೆ ಚಿತ್ರೋಧ್ಯಮ ಬಂದ್ ಗೆ ಕರೆ ನೀಡಲಾಗಿದೆ.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ವಿರುದ್ಧ ಒಕ್ಕೋರಲಿನ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ನಿರ್ಮಾಪಕ ಎ ಗಣೇಶ್ ಅವರು, ಚಿತ್ರರಂಗಕ್ಕೆಇಂದು ಅತ್ಯಂತ ನೋವಿನ ದಿನವಾಗಿದೆ. ಡಾ.ರಾಜ್ ಬಳಿಕ ಅಂಬಿ ಆ ಸ್ಥಾನ ತುಂಬಿದ್ದರು. ಹೆಚ್ಚು ಜನಾನುರಾಗಿಯಾಗಿದ್ದಾರೆ. ಅಂಬರೀಶ್ ರನ್ನು ಕೈಬಿಟ್ಟು ಚಿತ್ರರಂಗಕ್ಕೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಂಪುಟದಿಂದ ಅವರನ್ನು ಕೈ ಬಿಡಬಾರದು ಎಂದು ಮನವಿ ಮಾಡಿದರು. ಇನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಎಎಂ ಸುರೇಶ್, ಎಮಂಜು. ಭಾಮಾ ಹರೀಶ್ ನಿರ್ದೇಶಕ ಮಹೇಶ್ ಸುಖಧರೆ. ಕರಿಸುಬ್ಬು, ಪ್ರಮಿಳಾ ಜೋಷಾಯ್ ಅವರು ಪಾಲ್ಗೊಂಡಿದ್ದರು.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಯಶ್, ನಿರ್ಮಾಪಕ ಕೆಮಂಜು ಅಂಬರೀಶ್ ರನ್ನು ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಳೆ ಚಿತ್ರೋಧ್ಯಮ ಬಂದ್
ಇನ್ನು ಸಂಪುಟದಿಂದ ಅಂಬರೀಶ್ ರನ್ನು ಕೈ ಬಿಟ್ಟಿರುವುದನ್ನು ತೀವ್ರವಾಗಿ ವಿರೋಧಿಸಿರುವ ಚಿತ್ರರಂಗ ನಾಳೆ ಚಿತ್ರೋಧ್ಯಮ ಬಂದ್ ಗೆ ಕರೆ ನೀಡಿದೆ. ಕಾರ್ಮಿಕರ ಒಕ್ಕೂಟದಿಂದ ನಾಳೆ ಬಂದ್ ಗೆ ಕರೆ ನೀಡಲಾಗಿದ್ದು, ಕಲಾವಿದರ ಸಂಘ, ನಿರ್ದೇಶಕರ ಸಂಘ, ಛಾಯಾಗ್ರಾಹಕರ ಸಂಘ ಬಂದ್ ಗೆ ಬೆಂಬಲ ನೀಡುತ್ತಿದ್ದು, ನಾಳೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಚಿತ್ರರಂಗದ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಎಂದು ನಿರ್ಮಾಪಕ ಭಾಮಾ ಹರೀಶ್ ಹೇಳಿದರು.

ನಾಳೆ ಮಧ್ಯಾಹ್ನ 2ರಿಂದ ಮಧ್ಯಾಹ್ನ 3ವರೆಗೂ ಫಿಲಂ ಚೇಂಬರ್ ಬಳಿ ಮೌನ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.

Comments are closed.