ಅಂತರಾಷ್ಟ್ರೀಯ

ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ರಾಮಕೃಷ್ಣ ಮಿಷನ್‌ಗೆ ಐಸಿಸ್‌ನಿಂದ ಬೆದರಿಕೆ ಕರೆ

Pinterest LinkedIn Tumblr

banglaಢಾಕಾ, ಜೂ.18- ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ರಾಮಕೃಷ್ಣ ಮಿಷನ್‌ಗೆ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್‌ನಿಂದ ಬೆದರಿಕೆ ಕರೆ ಬಂದಿದೆ.

ಆಶ್ರಮ ನಡೆಸುತ್ತಿರುವ ಧಾರ್ಮಿಕ ಪ್ರವಚನಗಳನ್ನು ನಿಲ್ಲಿಸದೆ ಹೋದಲ್ಲಿ ಹತ್ಯೆಗೈಯ್ಯುವುದಾಗಿ ಆಶ್ರಮದ ಸಂತರೋರ್ವರಿಗೆ ಐಸಿಸ್ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಪ್ರಧಾನಿ ಶೇಖ್ ಹಸೀನಾ ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ.

ಬಾಂಗ್ಲಾ ಇಸ್ಲಾಂ ರಾಷ್ಟ್ರ. ಇಲ್ಲಿ ನಿಮ್ಮ ಧರ್ಮದ ಆರಾಧನೆ ನಡೆಸಬೇಡಿ. ನಿಮ್ಮ ದೇಶಕ್ಕೆ ಹಿಂತಿರುಗಿ. ಇಲ್ಲದಿದ್ದರೆ ಕತ್ತು ಸೀಳಿ ಕೊಲೆಗೈಯ್ಯುತ್ತೇವೆ ಎಂದು ಉಗ್ರರು ಪತ್ರ ಮುಖೇನ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾಹಿತಿ ಪಡೆದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ಅಧಿಕಾರಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನೆರೆ ರಾಷ್ಟ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂದು ಸ್ವರೂಪ್ ತಿಳಿಸಿದ್ದಾರೆ.

Comments are closed.