ರಾಷ್ಟ್ರೀಯ

ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲಿ ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ ..!

Pinterest LinkedIn Tumblr

jeansಸಾಂಬಾಲ, ಜೂ.18- ಉತ್ತರ ಪ್ರದೇಶದ ಸಾಂಭಲ್ ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಬಾರದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಕೆ.ಎಸ್.ಚೌಹಾಣ್ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ನೌಕರರು ಕಚೇರಿ ಕೆಲಸದ ಸಮಯದಲ್ಲಿ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಸರ್ಕಾರಿ ಕಚೇರಿ ಆವರಣದಲ್ಲಿ ನೌಕರರು ಗುಟ್ಕಾ, ಪಾನ್ ಅಥವಾ ಸಿಗರೇಟ್ ಉಪಯೋಗ ಮಾಡಿದಲ್ಲಿ 500 ರೂ. ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಕಚೇರಿ ಆವರಣದಲ್ಲಿ ಸಿಗರೇಟ್, ಪಾನ್ ಉಪಯೋಗ ನಿಷೇಧಿಸಿರುವುದನ್ನು ಸ್ವಾಗತಿಸಿರುವ ನೌಕರರು ಜೀನ್ಸ್, ಟೀ ಶರ್ಟ್ ನಿಷೇಧಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

Comments are closed.