ಕಲಬುರಗಿ: ಎಂತೆಂತಹವರನ್ನೋ ತೆಗೆದುಕೊಳ್ಳುತ್ತಿದ್ದಾರೆ, ಅಂಗಸೌಷ್ಟವ ಚೆನ್ನಾಗಿರುವವರನ್ನು ಕೈಬಿಡುತ್ತಿದ್ದಾರೆ. ನಾನು ಶಾಮನೂರು ಶಿವಶಂಕರಪ್ಪ ತರಹ ಅಲ್ಲ ಎಂದು ಶಾಸಕ ಎ.ಬಿ.ಮಲಕರೆಡ್ಡಿ ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ಇನ್ನು ಗಟ್ಟಿಯಾಗಿದ್ದೇನೆ. ಕೆಲಸ ಮಾಜಡುವ ತಾಕತ್ತು ನನಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಕ್ಷೇತ್ರದ ಜನರೊಂದಿಗೆ ಚರ್ಚಿಸಿದ ನಂಚರ ರಾಜಕೀಯ ಹೆಜ್ಜೆಯನ್ನು ಮುಂದಿಡುತ್ತೇನೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಮಲಕರೆಡ್ಡಿ ತಿಳಿಸಿದ್ದಾರೆ.
Comments are closed.