
ಕ್ಯಾಲಿಫೋರ್ನಿಯಾ: ತಾಯಿ ಮಕ್ಕಳ ಸಂಬಂಧ ಬೇರೆ ಮಾಡೋಕೆ ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ಪತ್ನಿಯಿಂದ ಮಗುವನ್ನ ದೂರ ಮಾಡಿದ್ದ ಪತಿ, ಆದ್ರೂ ದೇವರು ತಾಯಿ ಮಗ ಸೇರುವುದನ್ನ ತಪ್ಪಿಸಲಿಲ್ಲ. ಆದರೆ ಬರೋಬ್ಬರಿ 21 ವರ್ಷದ ಬಳಿಕ ಅವರರಿಬ್ಬರು ಒಂದಾಗಿದ್ದಾರೆ.
ಹೌದು. ಕ್ಯಾಲಿಫೋರ್ನಿಯಾ ನಿವಾಸಿ ಮಾರಿಯಾ ಮಾನ್ಸಿಯಾ 1995ರಲ್ಲಿ ಪತಿಯಿಂದ ಬೇರ್ಪಟ್ಟಿದ್ದರು. ಈ ವೇಳೆ ಪತಿ ವ್ಯಾಲೆಂಟಿನ್ 18 ತಿಂಗಳ ಮಗ ಸ್ಟೀವ್ನನ್ನು ತಮ್ಮೊಂದಿಗೆ ಕರೆದುಕೊಂಡು ಮೆಕ್ಸಿಕೋಗೆ ಹೋಗಿದ್ರು. ಹೀಗಾಗಿ ತಾಯಿಗೆ ಪುತ್ರನನ್ನ ನೋಡುವ ಭಾಗ್ಯ ಇರಲಿಲ್ಲ. ಮಗನನ್ನು ಪತ್ನಿಯಲ್ಲಿ ಹುಡುಕುತ್ತಾಳೆ ಅಥವಾ ಮಗನೆಲ್ಲಿ ತಾಯಿಯನ್ನ ಹುಡುಕುತ್ತಾನೆ ಎಂಬ ಕಾರಣಕ್ಕೆ ಒಂದೇ ಒಂದು ಸುಳಿವು ಸಿಗದಂತೆ ವ್ಯಾಲೆಂಟಿನ್ ಯಾವುದೇ ದಾಖಲೆ ಸಿಗದಂತೆ ಮಾಡಿದ್ರು. ಆದರೆ ತಾಯಿ ಸಂಬಂಧಿಗಳಿಂದ ಮಗನ ಫೋಟೋಗಳನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದರು.
ಆದ್ರೆ ಕೆಲವು ದಿನಗಳ ಹಿಂದೆ ವ್ಯಾಲೆಂಟಿನ್ ಕಾಣೆಯಾಗಿದ್ದರು. ಅಲ್ಲದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇತ್ತ ತಾಯಿಯನ್ನ ಹುಡುಕಿ ಹೊರಟ ಸ್ಟೀವ್ಗೆ ಅಧಿಕಾರಿಗಳ ಸಹಾಯದಿಂದ ಮಾರಿಯಾ ಅವರನ್ನ ಭೇಟಿ ಮಾಡಲು ಅಮೆರಿಕಾದ ಕ್ಯಾಲಿಫೋರ್ನಿಯಾಕ್ಕೆ ಕರೆದುಕೊಂಡು ಬರಲಾಗಿತ್ತು. ಇತ್ತ ಸ್ಯಾನ್ ಬೆರ್ನಾಡಿನೋ ಕೌಂಟಿಯಲ್ಲಿಯಲ್ಲಿರುವ ಮಕ್ಕಳ ಅಪಹರಣ ಘಟಕದಲ್ಲಿ ಮಾರಿಯಾ ಮಗನ ಅಪಹರಣವಾರುವ ಬಗ್ಗೆ ದೂರನ್ನ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಟೀವ್ ಬಗ್ಗೆ ಮಾಹಿತಿ ಕಲೆ ಹಾಕುತಿತ್ತು. ದೂರಿನ ಹಿನ್ನೆಲೆಯಲ್ಲಿ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿಗಳು ಸ್ಟೀವ್ ತಾಯಿಯನ್ನು ಪತ್ತೆ ಹಚ್ಚಲು ಸಹಕಾರಿಯಾಯಿತು.
ಬರೋಬ್ಬರಿ 21 ವರ್ಷಗಳ ಬಳಿಕ ಮಗನನ್ನ ನೋಡಿದ ತಾಯಿಗೆ ಕಣ್ಣೀರು ನಿಲ್ಲಿಸಲಾಗಲಿಲ್ಲ. ಇತ್ತ ತಾಯಿಯನ್ನ ನೋಡಿದ ಮಗನೂ ಕೂಡ ಭಾವುಕರಾದರು. ಇಷ್ಟು ದಿನ ತಾಯಿಯನ್ನ ಬಿಟ್ಟು ಬದುಕಿದೇ ಇನ್ನಾದರೂ ಅವರ ಜೊತೆ ಬದುಕುವುದಾಗಿ ಸ್ಟೀವ್ ಹೇಳಿಕೆ ನೀಡಿದ್ದಾರೆ.
Comments are closed.