
ತುಮಕೂರು: ಕಾಡಿನಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳು ಬೈಕ್, ಹಣ ಕದ್ದು ಪರಾರಿಯಾಗಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಡೆಯಲಿದೆ.
ತುಮಕೂರಿನ ನಾಮ ಚಿಲುಮೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರೇಮಿಗಳಾದ ಮಂಜುನಾಥ್ (23) ಮತ್ತು ಚೈತ್ರಾ ಅವರ ಮೇಲೆ ಹಲ್ಲೆ ಮಾಡಿರುವ ಇಬ್ಬರು ಅಪರಿಚಿತರು, ಬೈಕ್ ಮತ್ತು ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ನಂತರ ಚೈತ್ರಾ ಕತ್ತಿನಲ್ಲಿದ್ದ ಸರ ಕಿತ್ತುಕೊಂಡ ದುಷ್ಕರ್ಮಿಗಳು, ಅದು ನಕಲಿ ರೋಡ್ ಗೋಲ್ಡ್ ಎಂದು ತಿಳಿದ ನಂತರ ಸರವನ್ನು ಬಿಸಾಕಿದ್ದಾರೆ,ನಂತರ ಚಾಕುವಿನಿಂದ ಮಂಜುನಾಥ್‌ಗೆ ಇರಿದು, ಚೈತ್ರಾ ಮೇಲೆ ಹಲ್ಲೆ ಮಾಡಿ ಹಣ, ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಚೈತ್ರಾ, ದಾರಿ ಹೋಕರ ಸಹಾಯದಿಂದ ಮಂಜುನಾಥ್ ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ, ಕೆಲವರು ಪೊಲೀಸರಿಗೆ ದೂರು ನೀಡಿದರೇ ಮತ್ತೆ ಕೆಲವರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು.
ತೀವ್ರ ರಕ್ತಸ್ರಾವವಾಗುತ್ತಿದ್ದ ಮಂಜುನಾಥ್ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್ ಅಪಾಯದಿಂದ ಪಾರಾಗಿದ್ದು, ಇನ್ನೆರಡು ದಿನಗಳಲ್ಲಿ ಗುಣಮುಖರಾಗಲಿದ್ದಾರೆ. ಇನ್ನೂ ಮಂಜುನಾಥ್ ಮತ್ತು ಚೈತ್ರಾ ದೇವಾಸ್ಥಾನಕ್ಕೆ ಹೋಗಿರುವುದು ನಮಗೆ ತಿಳಿದಿರಲಿಲ್ಲ ಎಂದು ಮಂಜುನಾಥ್ ಸಂಬಂಧಿ ತಿಳಿಸಿದ್ದಾರೆ.
Comments are closed.