https://youtu.be/8Wm-37U_68Q
ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಕಾರ್ ಹರಿಸಿರುವ ಘಟನೆ ಅಮೆರಿಕದ ಅರಿಝೋನಾದಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ.
ಫೋರ್ಡ್ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸೈಕಲ್ನಲ್ಲಿ ಬರುತ್ತಿದ್ದ ಪ್ರಿಯಕರನ ಮೇಲೆ ಹರಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋರ್ಡ್ ಕಾರನ್ನು ಚಾಲನೆ ಮಾಡುತ್ತಿದ್ದ ಯುವತಿಯ ಹೆಸರು ಮಿಸ್ಟಿ ಲೀ ವಿಲ್ಕಿ ಎಂದು ವರದಿಯಾಗಿದೆ.
ಈಕೆ ಘಟನೆ ನಡೆದ 30 ನಿಮಿಷಗಳ ಬಳಿಕ ಪೊಲೀಸರಿಗೆ ಕರೆ ಮಾಡಿ, ನನ್ನ ಬಾಯ್ಫ್ರೆಂಡ್ ತನಗೆ ಹೆಚ್ಐವಿ ಇದೆ ಎಂದು ಈಗಷ್ಟೆ ಹೇಳಿದ. ಇದನ್ನು ಹೇಳುವಾಗ ಆತ ನಗುತ್ತಿದ್ದ. ಅಲ್ಲದೆ ಚಾಕು ತೆಗೆದು ನನ್ನ ಕೈ ಕಟ್ ಮಾಡಿದ. ಆಗ ನಾನು ಅತನಿಂದ ಪಾರಾಗಲು ಕಾರ್ ತೆಗೆದುಕೊಂಡು ಏನೂ ನೋಡದೆ ವೇಗವಾಗಿ ಚಾಲನೆ ಮಾಡಿಕೊಂಡು ಬಂದುಬಿಟ್ಟೆ ಅಂತ ಹೇಳಿದ್ದಾಳೆ.
ಘಟನೆಯಿಂದ ಯುವಕನ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವತಿ ಮಿಸ್ಟಿ ಮೇಲೆ ಕೊಲೆ ಯತ್ನದ ಕೇಸ್ ದಾಖಲಾಗಿದೆ.
Comments are closed.