ಕರಾವಳಿ

ಯೆನಪೋಯ ಸೆಂಟರ್ ಫಾರ್ ಎಥಿಕ್ಸ್ ಮತ್ತು ನೆಲ್ಲೂರಿನ ನಾರಾಯಣ ನರ್ಸಿಂಗ್ ಕಾಲೇಜು ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಸಹಿ

Pinterest LinkedIn Tumblr

yenapoya_nayaran_agrment

ಮಂಗಳೂರು,ಜೂ.17:  ಯೆನಪೋಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಹಾಗು ನೆಲ್ಲೂರಿನ ನಾರಾಯಣ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ನಾರಾಯಣ ನರ್ಸಿಂಗ್ ಕಾಲೇಜು ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಗುರುವಾರ ಸಹಿ ಮಾಡಲಾಯಿತು.

ನಾರಾಯಣ ಸಂಸ್ಥೆಯಲ್ಲಿ ಎಥಿಕ್ಸ್ ಸೆಂಟರ್‌ಅನ್ನು ಸ್ಥಾಪಿಸಲು, ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ತರಭೇತಿ, ಸಂಶೋಧನೆ ಮತ್ತು ಪಬ್ಲಿಕೇಶನ್ ಹಾಗು ಹೊಸ ಕೋರ್ಸುಗಳನ್ನು ಪ್ರಾರಂಭಿಸಲು ಯೆನಪೋಯ ವಿಶ್ವವಿದ್ಯಾನಿಲಯವು ಸಲಹೆ ಹಾಗು ಸಹಕಾರವನ್ನು ನೀಡುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿರುವುದು.

ಯೆನಪೋಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಫೆಬ್ರವರಿ 2011 ರಲ್ಲಿ ಸ್ಥಾಪನೆಗೊಂಡಿರುವುದು. ಎಥಿಕ್ಸ್ ಶಿಕ್ಷಣದ ವಿಷಯದಲ್ಲಿ ಸಂಶೋಧನೆ ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಯಲ್ಲಿ ಕಾರ್‍ಯನಿರತವಾಗಿದ್ದು ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಮೊಟ್ಟಮೊದಲ ಎಥಿಕ್ಸ್ ಕೇಂದ್ರ ಎಂದು ಹೆಗ್ಗಳಿಕೆ ಪಡೆದಿದೆ. ವೈದ್ಯಕೀಯ ರಂಗದಲ್ಲಿ ಮೆಡಿಕಲ್ ಎಥಿಕ್ಸ್ ಮತ್ತು ಬಯೋ ಎಥಿಕ್ಸ್ ವಿಷಯಗಳನ್ನು ಅಳವಡಿಸಿ ಶೈಕ್ಷಣಿಕ ಕಾರ್ಯಕ್ರಮವನ್ನು, ಸಂಶೋಧನೆ ಮತ್ತು ಸಾಂಸ್ಕ್ರತಿಕ ವಿನಿಮಯ ಮಾಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಡಾ. ಕಣ್ಣನ್, ಫ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ, ಒರಲ್ ಮೆಡಿಸಿನ್ ಮತ್ತು ಮಾಕ್ಸಿಲೋಫೇಶಿಯಲ್ ಇಮೇಜಿಯೋಲೊಜಿ, ನಾರಾಯಣ ಡೆಂಟಲ್ ಕಾಲೇಜು, ಯೆನಪೋಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್, ಡಾ. ಸಿ.ವಿ ರಘವೀರ್, ಸೆಂಟರ್ ಫಾರ್ ಎಥಿಕ್ಸ್‌ನ ನಿರ್ದೇಶಕಿ, ಡಾ. ವೀಣಾ ವಾಸ್ವಾನಿ ರವರು ಈ ಒಡಂಬಡಿಕೆಗೆ ಸಹಿ ಮಾಡಿದರು.

ಯೆನಪೋಯ ವಿಶ್ವವಿದ್ಯಾನಿಲಯದ ಅಡಿಶನಲ್ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ನಾಯರ್, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊಫೆಸರ್ ಅಬ್ದುಲ್ ರಹಮಾನ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.