ನವದೆಹಲಿ: ರಾಜಧಾನಿ ದೆಹಲಿಯ ಜನಪಥ್ ರಸ್ತೆಯಲ್ಲಿರುವ ಶಿವಸಾಗರ ರೆಸ್ಟೋರೆಂಟ್ ವಿರುದ್ಧ ಬೀದಿ ಮಕ್ಕಳಿಗೆ ಆಹಾರ ನೀಡಲು ನಿರಾಕರಿಸಿದ ಆರೋಪ ಕೇಳಿ ಬಂದಿದೆ. ದೆಹಲಿ ಸರ್ಕಾರ ನೇಮಿಸಿದ್ದ ಸತ್ಯಶೋಧನಾ ಸಮಿತಿಯ ತನಿಖಾ ವರದಿ ಇದನ್ನು ಖಚಿತ ಪಡಿಸಿದೆ.
ರೆಸ್ಟೋರೆಂಟ್ ಮಾಲೀಕನ ವಿರುದ್ಧ ದೆಹಲಿ ಪೊಲೀಸರು ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ ಮರುದಿನ ಸತ್ಯಶೋಧನಾ ಸಮಿತಿ ಈ ವರದಿ ನೀಡಿದೆ.
ತಾನು ಬೀದಿ ಮಕ್ಕಳ ಗುಂಪೊಂದನ್ನು ಊಟಕ್ಕೆಂದು ಶಿವಸಾಗರ್ ಹೊಟೆಲ್‌ಗೆ ಕರೆದುಕೊಂಡು ಹೋದಾಗ ಆಹಾರ ನೀಡಲು ಹೊಟೆಲ್ ಸಿಬ್ಬಂದಿ ನಿರಾಕರಿಸಿದರು ಎಂದು ಸೋನಾಲಿ ಶೆಟ್ಟಿ ಎಂಬ ಮಹಿಳೆ ದೂರು ನೀಡಿದ್ದಳು. ಅದಕ್ಕೆ ಪ್ರತಿಕ್ರಿಯಿಸಿದ್ದ ಹೊಟೆಲ್ ಅಧಿಕಾರಿಗಳು ಶೆಟ್ಟಿ ಉಚಿತ ಊಟಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ತನಿಖೆಗೆ ಆದೇಶಿಸಿ 24 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಸೂಚಿಸಿತ್ತು. ಅದರಂತೆ ವರದಿ ಸಲ್ಲಿಸಿರುವ ಸತ್ಯಶೋಧನಾ ಸಮಿತಿ ರೆಸ್ಟೋರೆಂಟ್ ಮಾನವಹಕ್ಕು ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವರದಿ ನೀಡಿದೆ.
Comments are closed.