
ನವದೆಹಲಿ: ಲೀಟರ್ಗೆ ಪೆಟ್ರೋಲ್ ಬೆಲೆಯಲ್ಲಿ 05 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 1.25 ಪೈಸೆ ಹೆಚ್ಚಳವಾಗಿದ್ದು, ಬುಧವಾರ ತಡರಾತ್ರಿಯಿಂದಲೇ ನೂತನ ದರ ಜಾರಿ ಬರಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಪರಿಷ್ಕೃತ ದರ 65.55ರೂ ಆಗಿದ್ದು, ಡಿಸೇಲ್ ದರ ಪ್ರತಿ ಲೀಟರ್ಗೆ 55.19ರೂ ಆಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೆರೇಶನ್ ತಿಳಿಸಿದೆ.
ಕಳೆದ ಮಾರ್ಚ್ 1ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮೂರನೇ ಬಾರಿ ಏರಿಕೆ ಕಂಡಿದ್ದು, ಕಳೆದ ಮೂರು ತಿಂಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 9.4 ರೂ ಹಾಗೂ ಡೀಸೆಲ್ 11.5 ರೂ ಏರಿಕೆಯಾಗಿದೆ.
Comments are closed.