ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ಕೆ.ಜಿ.ಲಕ್ಕೇನ ಹಳ್ಳಿಯಲ್ಲಿ ಪೊಲೀಸ್ ದೌರ್ಜನ್ಯಕ್ಕೀಡಾಗಿದ್ದಾಳೆ ಎನ್ನಲಾದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
23 ವರ್ಷ ಪ್ರಾಯದ ಶ್ವೇತಾ ಎಂಬ ಯುವತಿ ಯ ಮೇಲೆ ಜೂನ್ 8 ರಂದು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದು, ಇದರಿಂದ ಮನನೊಂದ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.
ನೆರೆಮನೆಯ ಪ್ರಭು ಎನ್ನುವವರು ನೀರಿನ ಪೈಪನ್ನು ಶ್ವೇತಾ ಅವರ ಮನೆಗೆ ಸೇರಿದ ಜಾಗದಲ್ಲಿ ಹಾಕಿ ದಬ್ಟಾಳಿಕೆ ನಡೆಸಲು ಮುಂದಾಗಿದ್ದರು.ಈ ಸಂಬಂದ ದೂರು ನೀಡಲು ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ತೆರಳಿದರೆ ಅಲ್ಲಿ ದೂರು ಸ್ವೀಕಾರ ಮೂಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಪ್ರಭು ಅವರ ಆಮಿಷಕ್ಕೆ ಪೊಲೀಸರು ತಂದೆ ನಾರಾಯಣ್ ಅವರು ಮನೆಯಲ್ಲಿ ಇಲ್ಲದ ವೇಳೆ ಶ್ವೇತಾ ಅವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿಗೆ ದೂರು ನೀಡಲಾಗಿದ್ದು,ಪ್ರಕರಣದ ತನಿಖೆ ಮುಂದುವರೆದಿದೆ.
ಶ್ವೇತಾ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕೆಎಎಸ್ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದರು.
-ಉದಯವಾಣಿ
Comments are closed.