
ಮಳೆಗಾಲ ಆರಂಭವಾಗಿದೆ. ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗಿರುವಾಗಲೇ ಮಳೆ ಹನಿಗಳು ಆರೋಗ್ಯದಲ್ಲಿ ಏರುಪೇರು ಮಾಡುವ ಶಕ್ತಿ ಹೊಂದಿದೆ. ಮಳೆಯಲ್ಲಿ ಎರಡು ಮೂರು ಬಾರಿ ನೆಂದರೆ ಶೀತ, ಕೆಮ್ಮು ಬರಬಹುದು. ವಾತಾವರಣದ ಥಂಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಜೊತೆಗೆ ದೇಹದ ಶಕ್ತಿ ಸಹ ಕಡಿಮೆಯಾಗುತ್ತದೆ. ಶೀತ, ಕೆಮ್ಮು, ನೆಗಡಿ ಮತ್ತಿತರ ಕಾಯಿಲೆಗಳಿಗೆ ಮನೆ ಮದ್ದುಗಳು ದಿವ್ಯೌಷಧ.
ಅರಿಸಿನ ಬೆರೆಸಿದ ಹಾಲು
ತಲೆ ತಲಾಂತರದಿಂದಲೂ ಕೂಡ ಅರಿಸಿನವು ಭಾರತೀಯ ಅಡುಗೆಯ ಒಂದು ಅವಿಭಾಜ್ಯ ಅಂಗ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅರಿಸಿನ ಉತ್ತಮ ನಂಜು ನಿರೋಧಕವಾಗಿದ್ದು, ಅರಿಸಿನ ಬೆರೆಸಿದ ಬಿಸಿಬಿಸಿ ಹಾಗೂ ಅಥವಾ ಅರಿಸಿನ ಬೆರೆಸಿದ ಚಹಾ ಕುಡಿದರೆ ಶೀತ, ಗಂಟಲು ಕೆರೆತ, ನೆಗಡಿ ದೂರವಾಗುತ್ತದೆ.
ಮನೆ ಮದ್ದಿನಲ್ಲಿ ಶುಂಠಿಗೆ ಪ್ರತ್ಯೇಕ ಸ್ಥಾನವಿರುತ್ತದೆ. ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ ಪುಡಿ ಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುಂಠಿಯನ್ನು ಪ್ರತಿಯೊಂದು ತರಕಾರಿಯೊಂದಿಗೆ ಸೇರಿಸಿ ಸೇವಿಸುವುದು ಒಳ್ಳೆಯದು.
ಶುಂಠಿ ಹಾಕಿದ ಚಹಾ ಸೇವನೆ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿನಿಂದ ಪಾರಾಗಲು ಏನನ್ನಾದರೂ ತಿನ್ನುವ, ಕುಡಿಯುವ ಮೊದಲು ಕೈಗಳನ್ನು ನೀರಿನಿಂದ ತೊಳೆದುಕೊಳ್ಳಿರಿ. ಆದಷ್ಟು ಶುಚಿ ಕಾಪಾಡಿಕೊಂಡರೆ ರೋಗಗಳಿಂದ ಪಾರಾಗಬಹುದು.
ಶೀತ, ಕೆಮ್ಮು ಬಂದಾಗ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಜೊತೆಗೆ ಸ್ವಲ್ಪ ಬಿಸಿಲಿಗೆ ದೇಹ ಒಡ್ಡುವುದರಿಂದ ಶೀತ, ನೆಗಡಿಯ ವೈರಸ್‌ನ್ನು ಸದೆಬಡಿಯಬಹುದು.
ಶೀತ ಸಂದರ್ಭದಲ್ಲಿ ದೇಹದಲ್ಲಿ ಕಫ ಸಂಗ್ರಹಣೆಯಾಗುತ್ತದೆ. ಹಾಗಾಗಿ ಕಫಕ್ಕೆ ಕಾರಣವಾಗುವ ಬೇಕರಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ತಿಂಡಿ, ಸಿಹಿಗಳನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ಶೀತವಾಗಿದ್ದಾಗ ಆದಷ್ಟು ಬಿಸಿಯ ಆಹಾರ ಸೇವನೆ ಒಳ್ಳೆಯದು.
Comments are closed.