ಕರ್ನಾಟಕ

ಮೂರು ದಿನಗಳಲ್ಲಿ ‘ಜಗ್ಗುದಾದ’ ಗಳಿಸಿದ್ದು ರೂ.12.60 ಕೋಟಿ!

Pinterest LinkedIn Tumblr

jaggu-dada

ಬೆಂಗಳೂರು: ಪ್ರೇಕ್ಷಕ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿರುವ ದರ್ಶನ್ ಅಭಿನಯದ ‘ಜಗ್ಗು ದಾದಾ’ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ ಎನ್ನುತ್ತಾರೆ ನಿರ್ಮಾಪಕ ಮತ್ತು ನಿರ್ದೇಶಕ ರಾಘವೇಂದ್ರ ಹೆಗಡೆ.

ರಾಘವೇಂದ್ರ ಹೆಗಡೆ ಹೇಳುವ ಪ್ರಕಾರ ‘ಜಗ್ಗು ದಾದ’ನ ಶುಕ್ರವಾರ, ಶನಿವಾರ ಮತ್ತು ಭಾನುವಾರದ ಗಳಿಕೆ ೧೨.೬೦ ಕೋಟಿ ಇದ್ದು, ಚೊಚ್ಚಲ ನಿರ್ದೇಶಕ ಮೊದಲ ಸಿನೆಮಾದಲ್ಲಿ ದೊಡ್ಡದನ್ನು ಸಾಧಿಸಿರುವ ಹೆಮ್ಮೆ.

“ನನ್ನ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ನಾನು ಕಲಿತಿದ್ದೇನೆಂದರೆ, ಸಿನೆಮಾದ ಹಣೆಬರಹ ಪ್ರೇಕ್ಷಕನ ಕೈನಲ್ಲಿದೆ. ಅವರಿಗೆ ಇಂದು ತುಂಬು ಹೃದಯದ ಧನ್ಯವಾದ ಹೇಳಿತ್ತೇನೆ. ನನ್ನ ಮೊದಲ ಸಿನೆಮಾದಲ್ಲಿ ಸಿಕ್ಕಿರುವ ಅನುಭವ ನನ್ನ ವೃತ್ತಿಜೀವನದಲ್ಲಿ ಇನ್ನೂ ಸಾಧಿಸಲು ಅನುವಾಗುತ್ತದೆ” ಎನ್ನುತ್ತಾರೆ ರಾಘವೇಂದ್ರ.

“ಕರ್ನಾಟಕದಲ್ಲಿ ಬಿಡುಗಡೆಯಾದ ಕಡೆಯಲ್ಲೆಲ್ಲಾ ಚಿತ್ರಮಂದಿರ ತುಂಬಿದೆ ಎಂಬ ಹಲಗೆ ನೋಡುವುದಕ್ಕೆ ಸಂತಸವಾಗುತ್ತದೆ. ದರ್ಶನ್ ಮತ್ತು ತಂಡದವರು ಇರದೇ ಹೋದರೆ ಇದು ಸಾಧ್ಯವಾಗುತ್ತಿರಲಿಲ್ಲ. ‘ಜಗ್ಗು ದಾದ’ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ಕಷ್ಟ ಪಟ್ಟು ದುಡಿದದ್ದೇ ಕಾರಣ ಎಂದು ರವಿ ಶಂಕರ್ ಹೇಳಿದ್ದಕ್ಕೆ ನನಗೆ ಖುಷಿಯಾಗುತ್ತಿದೆ. ನಾನು ಇನ್ನೂ ಹೆಚ್ಚಿನ ಕನ್ನಡ ಸಿನೆಮಾಗಳನ್ನು ಮಾಡಬೇಕೆಂದುಕೊಂಡಿದ್ದೇನೆ” ಎನ್ನುತ್ತಾರೆ ನಿರ್ದೇಶಕ.

ವಾರದ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರೇಕ್ಷಕರನ್ನು ಮತ್ತು ಕುಟುಂಬಗಳನ್ನು ‘ಜಗ್ಗು ದಾದ’ ಚಿತ್ರಮಂದಿರಕ್ಕೆ ಸೆಳೆಯಲಿದೆ ಎಂದು ಭರವಸೆ ವ್ಯಕ್ತಪಡಿಸುವ ರಾಘವೇಂದ್ರ “ನಾವು ಎಲ್ಲ ದಾಖಲೆಗಳನ್ನು ಮುರಿಯುವ ಭರವಸೆಯಲ್ಲಿದ್ದೇವೆ” ಎನ್ನುತ್ತಾರೆ.

ಅನ್ಯ ಭಾಷೆಗಳಲ್ಲಿ ಈ ಸಿನೆಮಾದ ರಿಮೇಕ್ ಗಾಗಿ ಅವಕಾಶಗಳು ಬಂದಿವೆಯಂತೆ. ತೆಲುಗು ನಟ ಗೋಪಿಚಂದ್ ಈ ವಾರದಲ್ಲಿ ಸಿನೆಮಾ ನೋಡಲಿದ್ದಾರಂತೆ. “ಬೆಂಗಾಳಿಯ ನಿರ್ದೇಶಕ ರಿಮೇಕ್ ಮಾಡುವ ಉತ್ಸಾಹ ತೋರಿದ್ದಾರೆ” ಎನ್ನುತ್ತಾರೆ ನಿರ್ದೇಶಕ.

Comments are closed.