ಹೂವಿನಹಡಗಲಿ: ಸಣ್ಣ ಮಳೆ ಬಂದರೆ ಸಾಕು ಈ ಶಾಲೆಯ ಶೈಕ್ಷಣಿಕ ಚಟುವಟಿಕೆ ಗಳು ಸ್ಥಗಿತಗೊಳ್ಳುತ್ತವೆ. ಸೋರುವ ಕೊಠಡಿಗಳು, ಮಳೆ ನೀರಲ್ಲೇ ನೆನೆಯುವ ಮಕ್ಕಳು, ಜಲಾವೃತಗೊಳ್ಳುವ ಶಾಲಾವರಣ.
ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಹೆಂಚಿನ ಚಾವಣಿ ಸೋರು ವುದರಿಂದ ಇಲ್ಲಿನ ವಿದ್ಯಾರ್ಥಿಗಳು ಮಳೆಯ ದಿನಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳ ಈ ಸಮಸ್ಯೆಗೆ ಸ್ಥಳೀಯ ಎಸ್‌ಡಿಎಂಸಿ ಆಗಲೀ, ಶಿಕ್ಷಣ ಇಲಾಖೆ ಅಧಿಕಾರಿ ಗಳಾಗಲಿ ಸ್ಪಂದಿಸಿಲ್ಲ ಎಂದು ಪೋಷಕರು ದೂರುತ್ತಿದ್ದಾರೆ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ ತಗ್ಗು ಪ್ರದೇಶ ದಲ್ಲಿರುವ ಶಾಲಾವರಣಕ್ಕೆ ನೀರು ನುಗ್ಗಿ ಬರುತ್ತದೆ. ಶಾಲೆಗೆ ಬರುವ ಮಕ್ಕಳು ನಿಂತ ಮಳೆ ನೀರಲ್ಲೇ ಸ್ವಚ್ಛಂದವಾಗಿ ಆಟವಾಡುತ್ತಾರೆ. ನಾಲ್ಕು ದಶಕದಷ್ಟು ಹಳೆಯದಾದ ಶಾಲಾ ಕಟ್ಟಡ ಶಿಥಿಲ ಗೊಂಡಿದ್ದು, ಹೆಂಚಿನ ಮೇಲ್ಛಾವಣಿಯ ಐದು ಕೋಣೆಗಳು ಸೋರುತ್ತಿವೆ. ಮಳೆಯ ದಿನಗಳಲ್ಲಿ ಈ ಶಾಲೆಯ ಮಕ್ಕಳಿಗೆ ಪಾಠಕ್ಕೂ, ಆಟಕ್ಕೂ ಜಾಗ ಇಲ್ಲದಂತಾಗಿ ಕಲಿಕೆಗೆ ಹಿನ್ನಡೆಯಾಗು ತ್ತದೆ ಎಂದು ಗ್ರಾಮಸ್ಥರಾದ ಲಕ್ಷ್ಮಣ ಬಾರ್ಕಿ, ಗಳಗನಾಥ ಮಲ್ಲಪ್ಪ ಅಳಲು ತೋಡಿಕೊಂಡಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಈಚೆಗೆ ಮೇಲ್ದರ್ಜೆಗೇರಿಸಿ ಪ್ರೌಢಶಾಲೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಮೂಲೆ ಕಟ್ಟಿನ ಹಳ್ಳಿಯ ಈ ಶಾಲೆಗೆ ಶಿಕ್ಷಣ ಇಲಾಖೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಿಲ್ಲ. ಶಾಲೆಗೆ ಸೇರಿದ ಕಿಟಕಿ, ಬಾಗಿಲು, ಇನ್ನಿತರೆ ಸಾಮಗ್ರಿಗಳನ್ನು ಕದ್ದು ಒಯ್ದರೂ ಶಾಲೆಯ ಸಿಬ್ಬಂದಿ ತಮಗೆ ಸಂಬಂಧ ಇಲ್ಲದವರಂತೆ ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಎಸ್‌ಡಿಎಂಸಿಯವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಮಳೆಯ ನೀರು ಶಾಲಾವರಣಕ್ಕೆ ನುಗ್ಗದಂತೆ ಚರಂಡಿ ವ್ಯವಸ್ಥೆ ಮಾಡಬೇಕು. ಸುತ್ತುಗೋಡೆ ಯನ್ನು ಎತ್ತರಿಸುವ ಜತೆಗೆ ಶಾಲಾ ಮೈದಾನವನ್ನು ಸಮತಟ್ಟು ಮಾಡಬೇಕು. ಹಳೆಯ ಕಟ್ಟಡದ ಶಿಥಿಲ ಹೆಂಚಿನ ಚಾವಣಿಯನ್ನು ಕಿತ್ತು ಹಾಕಿ ಹೊಸದಾಗಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.