ಬೆಂಗಳೂರು, ಜೂ. ೧೪- ಮಡಿಕೇರಿಗೆ ಕುಟುಂಬ ಸಮೇತ ಹೋಗಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ನಗದು ಸೇರಿ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಕೆಆರ್ ಪುರಂನ ತಂಬುಚೆಟ್ಟಿ ಪಾಳ್ಯದಲ್ಲಿ ನಡೆದಿದೆ.
ತಂಬುಚೆಟ್ಟಿ ಪಾಳ್ಯದ ಮನೆಗೆ ಬೀಗ ಹಾಕಿಕೊಂಡು ಖಾಸಗಿ ಕಂಪನಿಯೊಂದರ ಉದ್ಯೋಗಿ ನರೇಂದ್ರಬಾಬು ಅವರು ಕಳೆದ ಜೂ. 12 ರಂದು ಕುಟುಂಬ ಸಮೇತ ವಾರದ ರಜೆ ಕಳೆಯಲು ಮಡಿಕೇರಿಗೆ ಹೋಗಿದ್ದಾರೆ.
ಅಲ್ಲಿಂದ ಜೂ. 13 ರಂದು ಮನೆಗೆ ವಾಪಸ್ ಆಗಿ ಬಂದು ನೋಡಿದಾಗ ಮುಂಬಾಗಿಲ ಬೀಗ ಮುರಿದಿದ್ದ ದುಷ್ಕರ್ಮಿಗಳು ನಗದು ಸೇರಿ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮನೆ ಕಳವು
ಸಂಜಯ್ ನಗರದ ಖಾಸಗಿ ಕಂಪನಿಯ ಉದ್ಯೋಗಿ ಜೋಸೆಫ್ ಸ್ವಾಮುಯಲ್ ಅವರ ಮನೆಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 30 ಸಾವಿರ ನಗದು ಸೇರಿ 1 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಂಜಯ್ ನಗರದ ಆರ್‌ಎಂವಿ ಆಸ್ಪತ್ರೆಯ ಬಳಿ ವಾಸಿಸುತ್ತಿದ್ದ ಜೋಸೆಫ್ ಅವರು ಜೂ. 9 ರಂದು ಹೊರ ಹೋಗಿ ನಿನ್ನೆ ಬಂದು ನೋಡಿದಾಗ ದುಷ್ಕರ್ಮಿಗಳು ಕಳ್ಳತನ ಮಾಡಿರುವುದು ಕಂಡು ಬಂದಿದೆ.
ಜೋಸೆಫ್ ಅವರ ಪತ್ನಿ ಚಂಡೀಘಡಕ್ಕೆ ಹೋಗಿದ್ದು, ಅವರು ಬಂದ ನಂತರ ಕಳವು ಆಗಿರುವ ವಸ್ತುಗಳ ಮೌಲ್ಯ ಗೊತ್ತಾಗಲಿದೆ. ಸಂಜಯ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Comments are closed.