ರಾಷ್ಟ್ರೀಯ

ಪ್ರಿಯಕರನ ಜೊತೆ ಅನೈತಿಕ ಸಂಬಂಧ ಮುಂದುವರಿಸಲು ಹೆತ್ತ ಮಗುವನ್ನು ಕೊಂದ ತಾಯಿ

Pinterest LinkedIn Tumblr

murder-newಕೊಯಮತ್ತೂರು: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ತಾಯಿಯೇ ತನ್ನ ಮೂರು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಸೆಲ್ವಾಪುರಂ ನಲ್ಲಿ ನಡೆದಿದೆ.
ಕೊಯಮತ್ತೂರಿನ ಸೆಲ್ವಪುರಂ ನಿವಾಸಿ ದಿವ್ಯಾ ಮಗು ಕೊಂದ ಕ್ರೂರಿ ತಾಯಿ. ಈಕೆ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡು 1 ವರ್ಷದಿಂದ ಆತನನ್ನು ಬಿಟ್ಟು ಪೋಷಕರ ಮನೆಯಲ್ಲಿಯೇ ಇದ್ದಳು.
ಸೇಲ್ಸ್ ವುಮೆನ್ ಆಗಿ ಕೆಲಸ ಮಾಡುತ್ತಿದ್ದ ದಿವ್ಯಾಳಿಗೆ ಯುವಕನೊಬ್ಬನ ಜೊತೆ ಸಂಬಂಧವಿತ್ತು. ಇದನ್ನು ಮನಗಂಡ ಪೋಷಕರು ಮಗುವಿನ ಭವಿಷ್ಯದ ದೃಷ್ಟಿಯಿಂದ ಆತನೊಂದಿಗಿನ ಸಂಬಂಧವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.
ತನ್ನ ಸಂಬಂಧಕ್ಕೆ ಮಗು ಅಡ್ಡಿಯಾಗಿದೆ ಎಂದು ಕಳೆದ ರಾತ್ರಿ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ. ಬೆಳಗ್ಗೆಯಾದರೂ ಮಗು ಒಂದೇ ಸ್ಥಿತಿಯಲ್ಲಿ ಮಲಗಿದ್ದನ್ನು ಗಮನಿಸಿದ ದಿವ್ಯಾ ಸಹೋದರ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರೀಕ್ಷಿಸಿದ ವೈದ್ಯರು ಮಗು ಸತ್ತಿದೆಯೆಂದು ತಿಳಿಸಿದ್ದಾರೆ.
ಸಹೋದರ ದೂರಿನ ಅನ್ವಯ ಪೊಲೀಸರು ದಿವ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.