ಅಂತರಾಷ್ಟ್ರೀಯ

ಆಯತಪ್ಪಿ ಮೃಗಾಲಯದೊಳಗಿನ 12 ಅಡಿ ಆಳದ ಕಂದಕಕ್ಕೆ ಬಿದ್ದ ಮಗುವನ್ನು ದೈತ್ಯಾಕಾರದ ಗೋರಿಲ್ಲಾ ಮಾಡಿದ್ದೇನು..? ಈ ವಿಡಿಯೋ ನೋಡಿ …

Pinterest LinkedIn Tumblr

https://youtu.be/MaLHG4MsdXs

ವಾಷಿಂಗ್ಟನ್‌ : 4 ವರ್ಷದ ಮಗುವೊಂದು ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದು ಬೃಹತ್‌ ಗೋರಿಲ್ಲಾ ಕೈಗೆ ಸಿಕ್ಕಿ ದ ಭೀಭತ್ಸ ಘಟನೆ ಅಮೆರಿಕದ ಸಿನ್‌ಸಿನ್ನಾಟಿ ಮೃಗಾಲಯದಲ್ಲಿ ನಡೆದಿದೆ. ಈ ವಿಡಿಯೋ ನೋಡಿ ..

ಪ್ರಾಂಗಣದ ಕಂದಕ್ಕೆ ಬಿದ್ದ ಮಗುವಿನೆಡೆ ಧಾವಿಸಿ ಬಂದ 17 ವರ್ಷದ ದೈತ್ಯಾಕಾರದ ಗೋರಿಲ್ಲಾ ಮಗುವನ್ನು ನಿಧಾನವಾಗಿ ತನ್ನ ಕಠಿಣ ಕೈಗಳಿಂದ ಹಿಡಿಯಿತು. ಸುಮಾರು 10 ನಿಮಿಷಗಳಷ್ಟು ಕಾಲ ಗೋರಿಲ್ಲಾ ಕೈಯಲ್ಲಿ ಮಗುವಿತ್ತು.

ಈ ಭೀಭತ್ಸ ದೃಶ್ಯ ನೋಡುತ್ತಿದ್ದ ಪ್ರವಾಸಿಗರು ಭೀತರಾಗಿ ಸಹಾಯಕ್ಕಾಗಿ ಕೂಗಾಡತೊಡಗಿದರು. ಈ ವೇಳೆ ದಿಕ್ಕು ತೋಚದಾದ ಮೃಗಾಲಯ ಸಿಬಂದಿಗಳು ಗುಂಡಿಕ್ಕಿ ಗೋರಿಲ್ಲಾವನ್ನು ಹತ್ಯೆ ಮಾಡಿ ಮಗುವನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂತು. ಮಗು ಬೇಲಿ ದಾಟಿ ಕಂದಕಕ್ಕೆ ಬಿದ್ದಿದ್ದು ಈ ಕುರಿತಾಗಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Comments are closed.