
ಚೆನ್ನೈ: ನಿರಂತರ ಶೂಟಿಂಗ್ನಿಂದ ಕೊಂಚ ಬಳಲಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಸ್ವಲ್ಪ ದಿನ ಹಾಯಾಗಿದ್ದು ಬರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಅಮೆರಿಕಕ್ಕೆ ತೆರಳಿದ್ದಾರೆ. ಹಾಗಂತ ಆಪ್ತ ಮೂಲಗಳು ಹೇಳಿದ್ದಾಗಿ ವರದಿಯಾಗಿದೆ.
ಬಹುನಿರೀಕ್ಷಿತ ‘ಕಬಾಲಿ’ ಚಿತ್ರ ತೆರೆಗೆ ಬರುವ ನಿರೀಕ್ಷೆಯ ನಡುವೆಯೇ 65ರ ಹರೆಯದ ನಟ ರಜನಿಕಾಂತ್, ಇನ್ನೇನು ಮುಂದಿನ ತಿಂಗಳಲ್ಲಿ ಎಸ್. ಶಂಕರ್ ನಿರ್ದೇಶನದ ‘ಎಂದಿರನ್ 2.0’ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರಂತೆ. ಮತ್ತೊಂದು ಬಹುನಿರೀಕ್ಷಿತ ಚಿತ್ರದ ಶೂಟಿಂಗ್ಗೂ ಮೊದಲೇ ಒಂದಿಷ್ಟು ದಿನ ವಿಶ್ರಾಂತಿ ಬಯಸಿದ್ದುದೀ ಚಿತ್ರದ ಶೂಟಿಂಗ್ ಆರಂಭಗೊಂಡ ಎರಡು ವಾರದ ಬಳಿಕ ಸೆಟ್ಗೆ ಆಗಮಿಸಿವುದಾಗಿ ಹೇಳಿದ್ದಾರೆ ಎಂದು ಆಪ್ತ ಮೂಲಗಳು ಬಹಿರಂಗ ಪಡಿಸಿದ್ದಾಗಿ ಕೆಲ ಮಾಧ್ಯಮಗಳು ಪ್ರಕಟಿಸಿವೆ.
ಕಬಾಲಿ ಚಿತ್ರ ಜುಲೈ 1ರಂದು ತೆರೆಗೆ ಬರಲಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಈ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ಎಂದಿರನ್ 2.0’ ಚಿತ್ರದಲ್ಲಿ ರಜನಿಕಾಂತ್ ಎದುರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಎಮಿ ಜಾಕ್ಸನ್ ಈ ಚಿತ್ರದ ಇನ್ನೊಂದು ಆಕರ್ಷಣೆ.
Comments are closed.