“ಇದನ್ನ ಏಷ್ಯನ್ ಪೆಯಿಂಟ್‌ನವರು ಸ್ಪಾನ್ಸರ್ ಮಾಡಿದ್ದಾ?’ ಹೀಗೊಂದು ಕುಹಕದ ಟ್ವೀಟ್ ಓಡಾಡ್ತಿತ್ತು. ಕಾರಣ ಕ್ಯಾನೆ ಫಿಲಂ ಫೆಸ್ಟಿವಕ್‌ನಲ್ಲಿ ಐಶ್ವರ್ಯಾ ರೈ ಹಚ್ಚಿಕೊಂಡಿದ್ದ ಲಿಪ್‌ಸ್ಟಿಕ್. ನಸು ನೇರಳೆ ಬಣ್ಣದ ಈ ಲಿಪ್‌ಸ್ಟಿಕ್‌ನ್ನು ಐಶ್ ತುಟಿಗೆ ಹಚೊRಂಡಿದ್ದರೆ ಸಿಕ್ಕಾಪಟ್ಟೆ ಜೋಕ್‌ಗಳು ಹುಟ್ಟಿಕೊಂಡಿವೆ. ಆದರೆ ಐಶ್‌ಬೇಬಿ ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.
ತನ್ನ ನಾಲ್ಕೈದು ವರ್ಷದ ಬೇಬಿ ಜೊತೆಗೇ ಓಡಾಡುವ ಐಶ್ವರ್ಯಾ ರೈಗೆ ಕ್ಯಾನೆ ರೆಡ್ ಕಾಪೆìಟ್ ಮೇಲೆ ಹೆಜ್ಜೆಹಾಕೋದು, ತನ್ನ ವಿಶಿಷ್ಟ ಉಡುಪಿನಿಂದ ಗಮನ ಸೆಳೆಯೋದು ಹೊಸದೇನಲ್ಲ. ಆದರೆ ಈ ಬಾರಿ ಈಕೆ ಸುದ್ದಿಯಲ್ಲಿರೋದು ಲಿಪ್‌ಸ್ಟಿಕ್ ಕಾರಣಕ್ಕೆ. ನಸು ನೇರಳೆ ಬಣ್ಣದ ಲಿಪ್‌ಸ್ಟಿಕ್ ಎಲ್ಲರ ಗಮನಸೆಳೆಯಿತು. ರಾಮಿ ಕಾದಿ ಡಿಸೈನ್ ಮಾಡಿರುವ ಮೈತುಂಬ ಹೂಗೊಂಚಲಿನ ವಿನ್ಯಾಸದ ಆಫ್ಶೋಲ್ಡರ್ ಉದ್ದ ಗೌನ್‌ನಲ್ಲಿ ನೇರಳೆ ಹೂಗಳ ಡಿಸೈನೂ ಇದೆ. ಈ ಗೌನ್‌ನ ಬಣ್ಣ ನಸು ಗುಲಾಬಿ. ಆದರೆ ಎದ್ದುಕಾಣೋದು ನೇರಳೆ ಹೂವು ಮತ್ತು ನೇರಳೆ ಹಣ್ಣಿನಂಥ ಐಶ್ ತುಟಿಗಳು.
ಹದಿನೈದು ವರ್ಷಗಳಿಂದ ಕ್ಯಾನೆ ರೆಡ್‌ಕಾಪೆìಟ್ ಮೇಲೆ ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆಹಾಕುವ ಐಶ್‌ನಂಥ ಸುಂದರಿಗೆ ಈ ನೇರಳೆ ಲಿಪ್‌ಸ್ಟಿಕ್ ಹಾಕ್ಕೊಳ್ಳೋ ಐಡಿಯಾ ಬಂದಿದ್ದಾದರೂ ಹೇಗೆ? ಬಹಳ ಬೋಲ್ಡ್ ಅನಿಸುವ ಇಂಥ ಕಲರ್‌ನ ಅವರ್ಯಾಕೆ ಆಯ್ಕೆ ಮಾಡಿಕೊಂಡರು? ಅಂದರೆ ಐಶ್ವರ್ಯಾ ರೈ ಹೀಗೆ ಉತ್ತರಿಸುತ್ತಾರೆ, “ಸಿನಿಮಾವನ್ನು ವೃತ್ತಿಯಾಗಿ ಸ್ವೀಕರಿಸಿದವಳು ನಾನು. ಚಿತ್ರದಲ್ಲಿರಬಹುದು, ಚಿತ್ರದಿಂದ ಹೊರಗೆ ಚಿತ್ರೋತ್ಸವಗಳಂತಹ ಸಂದರ್ಭಗಳಲ್ಲಿರಬಹುದು, ಮೇಕಪ್‌ನ ನಾನು ಕಲೆ ಎಂದೇ ಪರಿಭಾವಿಸುತ್ತೇನೆ. ಈ ಡ್ರೆಸ್‌ಗೆ ಈ ಬಣ್ಣದ ಲಿಪ್‌ಸ್ಟಿಕ್ ಬೇಕಿತ್ತು. ಅದು ಸ್ಟೈಲಿಸ್ಟ್‌ನ ಆಯ್ಕೆಯಾಗಿತ್ತು. ಆ ಹಿನ್ನೆಲೆಯಲ್ಲೇ ವಿಭಿನ್ನ ಅನಿಸುವ ಈ ಲಿಪ್‌ಸ್ಟಿಕ್‌ನ° ಮರುಮಾತಿಲ್ಲದೇ ಹಚ್ಚಿಕೊಂಡೆ’ ಅನ್ನುತ್ತಾರೆ. ಇದನ್ನು ಕಲೆಯೆಂದೇ ಭಾವಿಸುವ ಕಾರಣ ನೇರಳೆಯಂಥ ಆಡ್‌ಕಲರ್ ಲಿಪ್‌ಸ್ಟಿಕ್‌ನಲ್ಲಿ ರೆಡ್‌ಕಾಪೆìಟ್ ಮೇಲೆ ನಡೆಯಲು ಐಶ್ವರ್ಯಾಗೆ ಯಾವ ಮುಜುಗರವೂ ಆಗಿಲ್ಲವಂತೆ.
ಆಡ್‌ಕಲರ್ ಲಿಪ್‌ಸ್ಟಿಕ್ ಹಚ್ಚಿದ್ರೆ ನಾವು ಸಖತ್ ಬೋಲ್ಡಾಗಿ ಕಾಣಿ¤àವಿ ಅನ್ನುವುದು ಬಾಲಿವುಡ್‌ನ ಹಲವು ನಾಯಕಿಯರ ಭಾವನೆ. ಆದರೆ ಕೆಲವರು ಇದನ್ನು ಇಷ್ಟಪಟ್ಟರೂ ಈ ಬಗೆಯ ಲಿಪ್‌ಸ್ಟಿಕ್‌ನ°ು ಪಬ್ಲಿಕ್‌ನಲ್ಲಿ ಹಾಕಿಕೊಂಡು ಬರಲು ಹಿಂಜರಿಯುತ್ತಾರೆ. ಆದರೆ ಐಶ್‌ಗೆ ಅಂಥ ಹಿಂಜರಿಕೆ ಇದ್ದಂತಿಲ್ಲ. ಆಕೆಗೆ ಹೆಚ್ಚು ಅಪ್‌ಡೇಟ್ ಅನಿಸಿಕೊಳ್ಳಲು, ಸಖತ್ ಟ್ರೆಂಡಿ ಅನಿಸಿಕೊಳ್ಳುವ ಮೊದಲಿಂದಲೂ ಹೆಚ್ಚು ಆಸಕ್ತಿ ಇತ್ತು. ಆದರೆ ತಾನೇ ಒಂದು ವಿಚಿತ್ರ ಟ್ರೆಂಡ್‌ನ್ನು ಸೃಷ್ಟಿಸುವ ಧಾವಂತ ಅಷ್ಟಾಗಿ ಕಾಣುತ್ತಿರಲಿಲ್ಲ. ಆದರೆ ಕ್ಯಾನೆಯಂಥ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾಮೂಲಿಗಿಂತ ಭಿನ್ನವಾದ ಇಂಥದ್ದೊಂದು ಮೇಕಪ್ ಸಾಹಸ ಮಾಡಿದ್ದಾರೆ. ಅಷ್ಟೇ ಅಲ್ಲ ಅದನ್ನು ಕಲಾತ್ಮಕ ಎಂದಿರುವುದು ಆಕೆಯ ಮೇಕಪ್‌ಪ್ರೀತಿಗೆ ಸಾಕ್ಷಿಯಂತಿದೆ.
– ನಿತ್ತಿಲೆ
-ಉದಯವಾಣಿ
Comments are closed.