ಅಂತರಾಷ್ಟ್ರೀಯ

ಪದೇ ಪದೇ ಫೋನ್‌ ನೋಡುವ ಚಟದಿಂದ ಮೂಡ್‌ ಹಾಳಾಗುತ್ತೆ!

Pinterest LinkedIn Tumblr

smartಈಗ ಎಲ್ಲರ ಕೈಲೂ ಸ್ಮಾರ್ಟ್‌ ಫೋನ್‌ ಮಿರ ಮಿರ ಮಿಂಚುತ್ತದೆ. ನಿಮಿಷಕ್ಕೆ ಹತ್ತಾರು ಬಾರಿ ಮೆಸೇಜ್‌ ಸದ್ದು ಮೊಳಗುತ್ತಿರುತ್ತದೆ. ಹತ್ತಾರು ವಾಟ್ಸಪ್‌ ಗ್ರೂಪ್‌, ಫೇಸ್‌ಬುಕ್‌, ಟ್ವೀಟರ್‌ ಅದು ಇದೂ ಅಂತ ಫ‌ುಲ್‌ ಬ್ಯುಸಿ. ಸ್ಮಾರ್ಟ್‌ಫೋನ್‌ ಗೀಳು ಹಚ್ಚಿಕೊಂಡು ಪದೇ ಪದೇ ಅದನ್ನು ನೋಡುತ್ತಿದ್ದರೆ, ಮೂಡ್‌ ಹಾಳಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

ಸಮೀಕ್ಷೆ ಪ್ರಕಾರ ಪದೇ ಪದೇ ಫೋನ್‌ ನೋಡುವುದರಿಂದ ವಿರಾಮದ ಸಮಯದಲ್ಲಿ ಕಾಲು ಭಾಗದಷ್ಟು ಸಮಯವನ್ನು ಅದೇ ತಿನ್ನುತ್ತದಂತೆ. ಪದೇ ಪದೇ ನಮ್ಮ ಗಮನವನ್ನು ಫೋನ್‌ ಸೆಳೆಯಯುದಂರಿಂದ ಸಂತೋಷದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಲಂಡನ್‌ ವಿಶ್ವವಿದ್ಯಾಲಯ ಕಾಲೇಜು ಈ ಸಮೀಕ್ಷೆ ನಡೆಸಿದ್ದು, ವಿವಿಧ ಪ್ರದೇಶಗಳಲ್ಲಿ 450 ಪುರುಷ, ಮಹಿಳೆಯರನ್ನು ಸಮೀಕ್ಷೆಗೊಳಪಡಿಸಿದೆ.

ಈ ವೇಳೆ ಅವರು ಫೋನ್‌ ನೋಡುವ ಸಂದರ್ಭಗಳು, ಮನಸ್ಥಿತಿ, ವರ್ತನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಆ ಪ್ರಕಾರ ದಿನಕ್ಕೆ ಶೇ.28ರಷ್ಟು ಮನಷ್ಯನೋರ್ವನ ಸಮಯವನ್ನು ಫೋನ್‌ಗಳು ತಿನ್ನುತ್ತವೆ ಎಂದು ಗೊತ್ತಾಗಿದೆ. ಇದರಿಂದ ಖುಷಿಯಾಗಿರುವ ಸಂದರ್ಭಗಳಲ್ಲೂ ಫೋನ್‌ ಹಿಡಿವ ವ್ಯಕ್ತಿಗಳು ತಮ್ಮ ಸಂತೋಷವನ್ನು ತಾವೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು…
ಅತಿಯಾಗಿ ಫೋನ್‌ ನೋಡೋದ್ರಿಂದ ಮನಸ್ಸಂತೋಷ ಹಾಳು

ವ್ಯಕ್ತಿಯೊಬ್ಬನ ದಿನದ ಕಾಲು ಭಾಗವನ್ನು ತಿನ್ನುವ ಸ್ಮಾರ್ಟ್‌ಫೋನ್‌!

ಪದೇ ಪದೇ ಫೋನ್‌ ನೋಡುವ ಚಟದಿಂದ ಮನಸ್ಥಿತಿ, ವರ್ತನೆಗಳು ಬದಲು

ಲಂಡನ್‌ ವಿಶ್ವವಿದ್ಯಾಲಯ ಕಾಲೇಜು ನಡೆಸಿದ ಸಮೀಕ್ಷ
-ಉದಯವಾಣಿ

Comments are closed.