ಬೆಂಗಳೂರು : ಎಲ್ಲೆ ಇರಲಿ ಕಂಠ ಪೂರ್ತಿ ಕುಡಿದು ತೇಲಾಡುವ ಕುಡುಕರು ಒಮ್ಮೆ ಗಮನ ಸೆಳೆಯುವುದು ಸಹಜ. ಇದೇ ರೀತಿ ವೇದಿಕೆಯಲ್ಲಿ ಆಸೀನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೇಯಸ್ಸು ಬಯಸಿ ಪಾನಮತ್ತ ವ್ಯಕ್ತಿಯೊಬ್ಬ ಪತ್ರ ಬರೆದು ಗಮನ ಸೆಳೆದಿದ್ದಾನೆ.
ಶನಿವಾರ ಮಾಗಡಿ ರಸ್ತೆಯ ಅಂಜನಾನಗರದ ಸ್ಪೂರ್ತಿ ಧಾಮದಲ್ಲಿ ನಡೆಯುತ್ತಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲೇ ಈ ಘಟನೆ ನಡೆದಿದ್ದು, ಸಭಾ ಸದರ ಮದ್ಯದಲ್ಲಿ ಕಂಠಪೂರ್ತಿ ಮಧ್ಯ ಸೇವಿಸಿದ್ದ ವ್ಯಕ್ತಿ ವೇದಿಕೆಯ ಎದುರು ಬಂದು ಮುಖ್ಯಮಂತ್ರಿಗಳಿಗೆ ಕೈ ಮುಗಿಯುತ್ತಾ ಕುಳಿತಿದ್ದಾನೆ.
ಇಷ್ಟೇ ಅಲ್ಲದೆ ಕೈಯಲ್ಲಿ ಕಾಗದವೊಂದನ್ನು ಹಿಡಿದು ಮುಖ್ಯಮಂತ್ರಿಗಳಿಗೆ ನೀಡಬೇಕೆಂದು ಬೇಡಿಕೊಂಡಿದ್ದಾನೆ. ಕೊನೆಗೆ ಭದ್ರತಾ ಸಿಬಂದಿಗಳು ಪತ್ರವನ್ನು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.
ಈ ಪತ್ರದಲ್ಲಿ ಮುಖ್ಯಮಂತ್ರಿಗಳೆ ನೀವು ಸಾವಿರ ವರ್ಷ ಚೆನ್ನಾಗಿ ಬಾಳಿ..ನಿಮಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ ಹೆಂಡತಿ ಮಕ್ಕಳು ಚೆನ್ನಾಗಿರಲಿ.ನಿಮಗೆ ದೇವರು ಆರೋಗ್ಯ ಆಯುಷ್ಯ ನೀಡಲಿ.ಮುಂದೆ ಕೂಡ ನೀವೇ ಮುಖ್ಯಮಂತ್ರಿಯಾಗಬೇಕು… ಹೀಗೆ ಮನಸ್ಸಿಗೆ ತೋಚಿದ್ದೇಲ್ಲ ಅಭಿಮಾನದಿಂದ ಬರೆದಿದ್ದಾನೆ.
ಅದೇನು ಬರೆದಿದ್ದಾನೋ ಎಂಬ ಕುತೂಹಲದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಓದಿ ಮುಗುಳ್ನಕ್ಕರು.
ಸಭಾಂಗಣದಲ್ಲಿ ಕುಡಿದು ನೆಲದಲ್ಲಿ ಕುಳಿತದ್ದು ಸರಿಯಾದಕ್ರಮ ಅಲ್ಲದೆ ಇದ್ದುದು ಮತ್ತು ಸಭೆಯಲ್ಲಿದ್ದವರಿಗೆ ಮುಜಗರ ತರುವ ವಾತಾವರಣ ನಿರ್ಮಾಣ ಮಾಡಿದುದರಿಂದ ಪತ್ರ ಬರೆದ ಪಾನಮತ್ತ ವ್ಯಕ್ತಿಯನ್ನು ಪೊಲೀಸರು ಹೋರಗೆಳೆದೊಯ್ದರು.
-ಉದಯವಾಣಿ
Comments are closed.