
ನವದೆಹಲಿ: ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಸಿಟ್ಟು ಎಂತಹುದು ಎಂದು ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ಗೊತ್ತು. ಮೈದಾನದಲ್ಲಿ ಕೋಪ ಬಂದರೆ ಅತ್ಯಂತ ಅಗ್ರೆಸಿವ್ ಆಗಿ ಆಡುವ ಈ ಕ್ರಿಕೆಟಿಗ ಮೈದಾನದ ಹೊರಗಿನ ಕೋಪವನ್ನು ಯಾರ ಮೇಲೆ ತೀರಿಸಿಕೊಳ್ಳುತ್ತಾರೆ ಗೊತ್ತಾ..?
ಗಂಭೀರ್ ತಮ್ಮ ಸಿಟ್ಟನ್ನು ಪತ್ನಿ ಮೇಲೋ, ಸಹ ಆಟಗಾರರ ಮೇಲೋ ಅಥವಾ ತಮ್ಮ ಕುಟುಂಬಸ್ಥರ ಮೇಲೋ ತೀರಿಸಿಕೊಳ್ಳುತ್ತಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ಪ್ರತೀ ಭಾರಿ ಗಂಭೀರ್ ಕೋಪ ಮತ್ತು ಹತಾಶೆ ಅವರ ಟೂಥ್ ಬ್ರಶ್ ಬಲಿಯಾಗುತ್ತದೆಯಂತೆ. ಈ ವಿಚಾರವನ್ನು ಸ್ವತಃ ಗೌತಮ್ ಗಂಭೀರ್ ಅವರೇ ಹೇಳಿಕೊಂಡಿದ್ದು, ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಂಭೀರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕೋಲ್ಕತಾ ತಂಡದ ನಾಯಕರಾಗಿರುವ ಪಂದ್ಯದ ವೇಳೆ ಮೈದಾನದ ಒಳ-ಹೊರಗೆ ನಡೆಯುವ ಘಟನೆಗಳಿಂದ ಕೆಲವೊಮ್ಮೆ ತೀವ್ರ ಕೋಪಗೊಳ್ಳುತ್ತಾರಂತೆ. ಹೀಗೆ ಕೋಪಗೊಂಡಾಗ ಗಂಭೀರ್ ತಾವು ಹಲ್ಲುಜ್ಜುವ ಬ್ರಶ್ ಮೇಲೆ ತಮ್ಮ ಕೋಪವನ್ನೆಲ್ಲಾ ತೀರಿಸಿಕೊಳ್ಳುತ್ತಾರಂತೆ. “ನನ್ನ ಮೂಡ್ ಹೇಗಿದೆ ಎಂಬುದನ್ನು ನಾನು ನನ್ನ ಬ್ರಶ್ ಅನ್ನು ಹೇಗೆ ಬಳಕೆ ಮಾಡುತ್ತಿದ್ದೇನೆ ಎಂಬುದರ ಮೇಲೆ ತಿಳಿಯಬಹುದು. ನನ್ನ ಕೋಪವನ್ನು ನನ್ನ ಹೆಂಡತಿ ಮೇಲಾಗಲಿ ಅಥವಾ ನನ್ನ ಸಹ ಆಟಗಾರರ ಮೇಲಾಗಲಿ ತೀರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನನ್ನ ಕೋಪಕ್ಕೆ ಟೂಥ್ ಬ್ರಶ್ ಬಲಿಯಾಗುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ಐಪಿಎಲ್ ಸೀಸನ್ 9 ಸರಣಿಯಲ್ಲಿ ಪ್ರಸ್ತುತ ಪ್ಲೇ ಆಫ್ ಸುತ್ತಿನ ಕನಸು ಕಾಣುತ್ತಿರುವ ಕೆಕೆಆರ್ ತಂಡ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಜೀವಂತವಾಗಿರುತ್ತದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಅನಿರೀಕ್ಷಿತ ಸೋಲುಗಳಿಂದಾಗಿ ಕಂಗೆಟ್ಟಿರುವ ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯದಲ್ಲಿ ಬಾರಿ ಅಂತರದ ಜಯ ಆ ತಂಡಕ್ಕೆ ಅನಿವಾರ್ಯವಾಗಿದೆ.
Comments are closed.