ರಾಷ್ಟ್ರೀಯ

ಕಾಶ್ಮೀರಕ್ಕೆ ಅಪ್ಪಳಿಸಲಿದೆಯಂತೆ ವಿನಾಶಕಾರಿ ಭೂಕಂಪ!

Pinterest LinkedIn Tumblr

earthquake_web

ನ್ಯೂಯಾರ್ಕ್: ಅಂತಾರಾಷ್ಟ್ರೀಯ ಭೂವೈಜ್ಞಾನಿಗಳ ತಂಡವೊಂದರ ಸಮೀಕ್ಷೆ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ರಿಕ್ಟರ್ ಮಾಪನದ 8 ರ ತೀವ್ರತೆಯ ಭೂಕಂಪವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

2005ರಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಹಿಮಾಲಯ ತಪ್ಪಲಿನ ರಾಜ್ಯದಲ್ಲಿ ಭೂಕುಸಿತ ಉಂಟಾಗಿ ಭೂಮಿ ಬಾಯ್ತೆರೆಯುವ ಲಕ್ಷಣಗಳು ಅಧ್ಯಯನದಲ್ಲಿ ತಿಳಿದಿದೆ ಎಂದು ಅಮೆರಿಕದ ಓರೆಗಾನ್ ವಿಶ್ವವಿದ್ಯಾಲಯದ ಭೂ ವಿಜ್ಞಾನಿ ಮತ್ತು ಬರಹಗಾರ, ಸಂಶೋಧಕ ಯಾನ್ ಗ್ಯಾವಿಲಟ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಪ್ರಬಲ ಭೂಕಂಪವಾಗಿಲ್ಲ, ಸಾಮಾನ್ಯವಾಗಿ ಕಣಿವೆ ಪ್ರದೇಶಗಳಲ್ಲಿ ಹೆಚ್ಚು ದಿನ ಭೂಮಿ ಕಂಪಿಸದಿದ್ದಲ್ಲಿ ಮುಂದೊಂದು ದಿನ ಅವಘಡ ಸಂಭವಿಸುವ ಅವಕಾಶ ಹೆಚ್ಚು ಎಂದು ತಿಳಿಸಿದ್ದಾರೆ. ಅಧ್ಯಯನಗಳು ಈ ಹಿಂದೆ ಘಟಿಸಿದ ಭೂಕಂಪನದ ಆಧಾರದ ಮೇಲೆ ಅವಲಂಬಿತವಾಗಿರುತ್ತವೆ ಎಂದು ಯಾನ್ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ ಭೂಕಂಪ ಹಿಂದೆಂದಿಗಿಂತಲೂ ಹೆಚ್ಚಿನ ಹಾನಿ ಉಂಟು ಮಾಡಲಿದೆ ಎಂದಿದ್ದಾರೆ.

Comments are closed.